Publish Date: Thu, 16 Jul 2026 (21:11 IST)
Updated Date: Thu, 16 Jul 2026 (21:14 IST)
ಕಾರ್ಡಿಫ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ರೋಹಿತ್ ಶರ್ಮಾಗೆ ಮತ್ತೊಂದು ಹೆಸರೇ ಹಿಟ್ ಮ್ಯಾನ್. ಅವರು ಕ್ರೀಸ್ ನಲ್ಲಿದ್ದರೆ ರನ್ ಗತಿ ಟಾಪ್ ಗೇರ್ ನಲ್ಲಿರುತ್ತದೆ. ಸುಮ್ಮನೇ ಟುಕು ಟುಕು ಬ್ಯಾಟಿಂಗ್ ಮಾಡುವವರೇ ಅಲ್ಲ. ಶಾರ್ಟ್ ಬಾಲ್ ಸಿಕ್ಕರೆ ಸಿಕ್ಸರ್ ಬಾರಿಸುವವರೇ. ಹೀಗಾಗಿಯೇ ಅವರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ.
ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ರೋಹಿತ್ ನಿಧಾನಗತಿಯ ಬ್ಯಾಟಿಂಗ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಎಲ್ಲಿ ಕಳೆದು ಹೋದ್ರು ಆ ಹಿಟ್ ಮ್ಯಾನ್ ರೋಹಿತ್ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹೀಗೇ ಮುಂದುವರಿದರೆ 2027 ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನ್ನುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ 26 ರನ್ ಗಳಿಸಲು ಅವರು ಬರೋಬ್ಬರಿ 47 ಎಸೆತ ತೆಗೆದುಕೊಂಡಿದ್ದಾರೆ. ರೋಹಿತ್ ಯಾವತ್ತೂ ಇಷ್ಟು ನಿಧಾನಗತಿಯ ಇನಿಂಗ್ಸ್ ಆಡುವವರೇ ಅಲ್ಲ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇಂದಿನ ಪಂದ್ಯದಲ್ಲಿ ಭಾರತ ಓವರ್ ಗಳಲ್ಲಿ 44 ಓವರ್ ಗಳಲ್ಲಿ 233 ರನ್ ಗಳಿಗೆ ಸರ್ವಪತನ ಕಂಡಿತು. ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರೂ ಈ ಪಂದ್ಯದಲ್ಲಿ ಅದ್ಭುತ ಕಮ್ ಬ್ಯಾಕ್ ಮಾಡಿದ್ದಾರೆ. ಕೆಲವು ಮನಮೋಹಕ ಹೊಡೆತಗಳ ಮೂಲಕ ರಂಜಿಸಿದ ಅವರು ಒಟ್ಟು 66 ಎಸೆತಗಳಿಂದ 65 ರನ್ ಗಳಿಸಿ ಔಟಾದರು. ಇನ್ನು, ಶ್ರೇಯಸ್ ಅಯ್ಯರ್ ರನ್ ಗಳಿಸಿ 66 ರನ್ ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 13 ಎಸೆತಗಳಿಂದ 20 ರನ್ ಗಳಿಸಿ ಅಜೇಯರಾಗುಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ