Select Your Language

Notifications

webdunia
webdunia
webdunia
webdunia

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

Indian cricket, cricketer Rohit Sharma, Virat Kohli
Photo Credit X
ಲಂಡನ್‌: ಬಹುದಿನಗಳ ನಂತರ ಮೈದಾನಕ್ಕೆ ಕಾಲಿಟ್ಟದ ಸ್ಟಾರ್‌ ಜೋಡಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇವರಿಬ್ಬರೂ ಬೇಗನೆ ಪೆವಿಲಿಯನ್‌ ಸೇರಿಕೊಂಡರು.

ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಹೀನಾಯ ಸೋಲಿನ ಬಳಿಕ ಭಾರತ ತಂಡವು ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸುತ್ತಿದೆ. ಹೀಗಾಗಿ, ರೋಹಿತ್‌ ಮತ್ತು ವಿರಾಟ್‌ ಆಟದ ಮೇಲೆ ಭಾರೀ ನಿರೀಕ್ಷೆ ಮೂಡಿತ್ತು. 

ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಜೋ ರೂಟ್‌ (76), ಲಿಯಾಮ್‌ ದಾಸನ್‌ (68) ಅವರ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡವು 47.5 ಓವರ್‌ಗಳಲ್ಲಿ 258 ರನ್‌ ಗಳಿಸಿತು. ಸ್ಪಿನ್ನರ್‌ ಅಕ್ಷರ್ ಪಟೇಲ್‌ ನಾಲ್ಕು ವಿಕೆಟ್‌ ಪಡೆದರೆ, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್ ತಲಾ ಎರಡು ವಿಕೆಟ್‌ ಕಬಳಿಸಿದರು.

ಗುರಿ ಬೆನ್ನಟ್ಟಿದ ಭಾರತ ತಂಡವು 48 ರನ್‌ ಗಳಿಸುವಷ್ಟರಲ್ಲಿ ರೋಹಿತ್‌ ಮತ್ತು ವಿರಾಟ್ ಅವರನ್ನು ಕಳೆದುಕೊಂಡಿತು. ರೋಹಿತ್‌ 11 ರನ್‌ ಗಳಿಸಿದರೆ, ವಿರಾಟ್‌ 5 ರನ್‌ ಗಳಿಸಿ ಔಟಾದರು. ಭಾರತ ತಂಡವು ಸದ್ಯ 12 ಓವರ್‌ಗಳಲ್ಲಿ 2 ವಿಕೆಟ್‌ಗೆ 67 ರನ್‌ ಗಳಿಸಿದೆ. ನಾಯಕ ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಕ್ರೀಸ್‌ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಈ ಲೈನ್ ಚೆನ್ನಾಗಿದೆ ಮಗಾ.. ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಕನ್ನಡ ಕಲರವ Video