Publish Date: Thu, 25 Jun 2026 (09:27 IST)
Updated Date: Thu, 25 Jun 2026 (09:29 IST)
ಮುಂಬೈ: ಭಾರತದ 15 ವರ್ಷದ ಯುವ ಕ್ರಿಕೆಟ್ ದೂಳ ಎನಿಸಿಕೊಂಡಿರುವ ವೈಭವ್ ಸೂರ್ಯವಂಶಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮದೇ ಆದ ಪ್ರತ್ಯೇಕ ಚೇಂಜಿಂಗ್ ರೂಮ್ ಬಳಸಲಿದ್ದಾರೆ. ಈ ವಿಲಕ್ಷಣ ನಿಯಮಕ್ಕೆ ಕಾರಣ ಯಾವುದೇ ವಿವಿಐಪಿ ಸೌಕರ್ಯವಲ್ಲ, ಬದಲಿಗೆ ಅಂತರರಾಷ್ಟ್ರೀಯ ನಿಯಮಗಳು!
ಐಸಿಸಿ ಮತ್ತು ಇಸಿಬಿ ಬಾಲಕಾರ್ಮಿಕ/ಅಪ್ರಾಪ್ತರ ರಕ್ಷಣಾ ನಿಯಮಗಳು
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಇಂಗ್ಲೆಂಡ್ ಆಂಡ್ ವೇಲ್ಸ್ ಕ್ರಿಕೆಟ್ ಮಂಡಳಿಯ 'ಸೇಫ್ ಹ್ಯಾಂಡ್ಸ್' ನಿಯಮಾವಳಿಗಳ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಕ್ರೀಡಾಪಟು ವಯಸ್ಕರ ಜೊತೆಗೆ ಒಂದೇ ಚೇಂಜಿಂಗ್ ರೂಮ್ ಹಂಚಿಕೊಳ್ಳುವಂತಿಲ್ಲ. ಬ್ರಿಟಿಷ್ ಕ್ರೀಡಾ ಕಾನೂನುಗಳಲ್ಲಿ ಅಪ್ರಾಪ್ತರ ಸುರಕ್ಷತೆ ಮತ್ತು ರಕ್ಷಣೆಗೆ ಅತ್ಯಂತ ಕಠಿಣ ನಿಯಮಗಳಿದ್ದು, ವೈಭವ್‌ಗೆ ಕೇವಲ 15 ವರ್ಷ ತುಂಬಿರುವುದರಿಂದ ಇಂಗ್ಲೆಂಡ್‌ನ ಎಲ್ಲಾ ಕ್ರೀಡಾಂಗಣಗಳಲ್ಲಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ.
ಪಂದ್ಯದ ವೇಳೆ ಯಾವುದೇ ನಿರ್ಬಂಧವಿಲ್ಲ
ಈ ಪ್ರತ್ಯೇಕತೆಯ ನಿಯಮವು ಕೇವಲ ಪಂದ್ಯಕ್ಕೆ ಮೊದಲು ಮತ್ತು ನಂತರ ಬಟ್ಟೆ ಬದಲಾಯಿಸುವ ಸಮಯಕ್ಕೆ ಮಾತ್ರ ಅನ್ವಯಿಸುತ್ತದೆ. ಉಳಿದಂತೆ:
ಪಂದ್ಯ ನಡೆಯುತ್ತಿರುವಾಗ ವೈಭವ್ ಅವರು ಭಾರತ ತಂಡದ ಮುಖ್ಯ ಡ್ರೆಸ್ಸಿಂಗ್ ರೂಮ್‌ನಲ್ಲೇ ಇರಲಿದ್ದಾರೆ.
ತಂಡದ ತಂತ್ರಗಾರಿಕೆ ಸಭೆಗಳು ಮತ್ತು ಹಿರಿಯ ಆಟಗಾರರ ಚರ್ಚೆಗಳಲ್ಲಿ ಭಾಗವಹಿಸಲು ಅವರಿಗೆ ಸಂಪೂರ್ಣ ಮುಕ್ತ ಅವಕಾಶವಿರುತ್ತದೆ.
ವೈಭವ್ ಸೂರ್ಯವಂಶಿ ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವಾಗ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರರೊಂದಿಗೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಭಾರತದಲ್ಲಿ ಇಂತಹ ಕಠಿಣ ನಿಯಮಗಳಿಲ್ಲದ ಕಾರಣ ಅವರಿಗೆ ಇದು ಹೊಸ ಅನುಭವವಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರ ವಯಸ್ಸನ್ನು ಪರಿಗಣಿಸಿ ಅವರ ಪೋಷಕರಿಗೂ ಅವರ ಜೊತೆಯಲ್ಲಿಯೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಇಸಿಬಿ ವಿಶೇಷ ಅನುಮತಿ ನೀಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ