Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಅವಧಿ ಮುಕ್ತಾಯವಾಗುವುದು ಯಾವಾಗ

Gautam Gambhir
ಮುಂಬೈ: ಟೀಂ ಇಂಡಿಯಾ ಇತ್ತೀಚೆಗಿನ ಪ್ರದರ್ಶನ ಗಮನಿಸಿದ ನಂತರ ಕೋಚ್ ಗೌತಮ್ ಗಂಭೀರ್ ರನ್ನು ಕಿತ್ತೊಗೆಯಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಕೋಚ್ ಆಗಿ ಗಂಭೀರ್ ಅವಧಿ ಮುಕ್ತಾಯವಾಗುವುದು ಯಾವಾಗ ಇಲ್ಲಿದೆ ವಿವರ.

ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾದರು. ಜುಲೈ 2024 ರ ಜುಲೈನಲ್ಲಿ ಗಂಭೀರ್ ಕೋಚ್ ಆಗಿ ತಮ್ಮ ಪ್ರಯಾಣ ಆರಂಭಿಸಿದ್ದರು. ಇದೀಗ ಅವರ ಕೋಚ್ ಅವಧಿ ಎರಡು ವರ್ಷ ಪೂರೈಸಿದೆ.

ಇದುವರೆಗೆ ಐಸಿಸಿ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಗೆದ್ದಿದ್ದು ಅವರ ಕೋಚಿಂಗ್ ಅವಧಿಯಲ್ಲಿ ಟೀಂ ಇಂಡಿಯಾ ಮಾಡಿದ ಸಾಧನೆ. ಚಾಂಪಿಯನ್ಸ್ ಟ್ರೋಫಿ ಪಂದ್ಯ ಆಡುವಾಗ ಅವರಿನ್ನೂ ತಂಡಕ್ಕೆ ಎಂಟ್ರಿಯಾಗಿದ್ದರಷ್ಟೇ. ರಾಹುಲ್ ದ್ರಾವಿಡ್ ಆಗಲೇ ಕಟ್ಟಿದ್ದ ರೋಹಿತ್ ಶರ್ಮಾ ಬಳಗ ಆ ಟೂರ್ನಮೆಂಟ್ ನಲ್ಲಿ ತನ್ನ ಯಶಸ್ವೀ ಯಾತ್ರೆ ಮುಂದುವರಿಸಿತ್ತು.

ಉಳಿದಂತೆ ಗಂಭೀರ್ ಅವಧಿಯಲ್ಲಿ ಟೀಂ ಇಂಡಿಯಾ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಇತ್ತೀಚೆಗಂತೂ ಉಭಯ ದೇಶಗಳ ಸರಣಿ ಗೆಲ್ಲಲೂ ತಿಣುಕಾಡುವಂತಾಗಿದೆ. ಟೆಸ್ಟ್, ಏಕದಿನ ಬಳಿಕ ಈಗ ಟಿ20 ಕ್ರಿಕೆಟ್ ನಲ್ಲೂ ಭಾರತ ಅಧೋಗತಿಗೆ ತಲುಪಿದೆ.

ಹೀಗಾಗಿ ಅಭಿಮಾನಿಗಳು ಗಂಭೀರ್ ಅವಧಿ ಯಾವಾಗ ಮುಗಿಯುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಬಿಸಿಸಿಐ ಗಂಭೀರ್ ಜೊತೆಗೆ ನಾಲ್ಕು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಅದರಂತೆ 2027 ರ ಡಿಸೆಂಬರ್ ನಲ್ಲಿ ಗಂಭೀರ್ ಅವಧಿ ಮುಕ್ತಾಯವಾಗಲಿದೆ. ಅಂದರೆ ಮುಂದಿನ ಏಕದಿನ ವಿಶ್ವಕಪ್ ಗೂ ಗಂಭೀರ್ ಮತ್ತು ಬಳಗವೇ ಟೀಂ ಇಂಡಿಯಾ ಕೋಚ್ ಆಗಿರಲಿದೆ. ಅಂದರೆ ಇನ್ನೂ ಒಂದೂವರೆ ವರ್ಷದಷ್ಟು ಕಾಲ ಗಂಭೀರ್ ಕೋಚ್ ಆಗಿರಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ದಂಪತಿ ಪಕ್ಕವೇ ಕೂತು ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಶುಭಮನ್ ಗಿಲ್: ನೆಟ್ಟಿಗರಿಂದ ಕಾಮೆಂಟೋ ಕಾಮೆಂಟ್ Video