Select Your Language

Notifications

webdunia
webdunia
webdunia
webdunia

FIFA WC: ಅರ್ಜೆಂಟೀನಾ ಗೆಲ್ಲುತ್ತೆ, ಸಂಭ್ರಮಾಚರಣೆ ಮಾಡಲು ಶಾಲೆಗಳಿಗೆ ರಜೆ ಕೊಟ್ಟಿದ್ದ ಕೇರಳ: ಆದ್ರೆ ಆಗಿದ್ದೇ ಬೇರೆ

FIFA World Cup
Photo Credit: X
ನ್ಯೂಜೆರ್ಸಿ: ಅರ್ಜೆಂಟೀನಾ ಫಿಫಾ ಫೈನಲ್ ಗೆಲ್ಲುತ್ತದೆ, ಮಕ್ಕಳೆಲ್ಲಾ ಸಂಭ್ರಮಾಚರಣೆ ಮಾಡಲಿ ಎಂದು ಕೇರಳದಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ಆಗಿದ್ದೇ ಬೇರೆ.

ನಮ್ಮ ದೇಶ ಫುಟ್ಬಾಲ್ ವಿಶ್ವಕಪ್ ನಲ್ಲಿ ಪ್ರತಿನಿಧಿಸುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಫುಟ್ಬಾಲ್ ಕ್ರೇಜ್ ಕೆಲವು ಕಡೆ ಅಪರಿಮಿತವಾಗಿದೆ. ಅದರಲ್ಲೂ ಕೇರಳ, ಮೇಘಾಲಯ, ಪಶ್ಚಿಮ ಬಂಗಾಲ ಸೇರಿದಂತೆ ಕೆಲವು ರಾಜ್ಯದಲ್ಲಿ ಫುಟ್ಬಾಲ್ ನ್ನು ದೇವರಂತೆ ಆರಾಧಿಸುವವರಿದ್ದಾರೆ.

ಕೇರಳದಲ್ಲಿ ವಿಶೇಷವಾಗಿ ಅರ್ಜೆಂಟೀನಾ ತಂಡವನ್ನು, ಲಿಯೋನೆಲ್ ಮೆಸ್ಸಿ ಎಂದರೆ ಪೂಜಿಸುವ ಅಭಿಮಾನಿಗಳಿದ್ದಾರೆ. ಈ ಬಾರಿ ಅರ್ಜೆಂಟೀನಾವೇ ಚಾಂಪಿಯನ್ ಆಗುತ್ತದೆ ಎಂದು ಅಲ್ಲಿನ ಅಭಿಮಾನಿಗಳು ಮೊದಲೇ ಹೇಳುತ್ತಿದ್ದರು. ಆದರೆ ನಿನ್ನೆ ಅಚ್ಚರಿಯೆಂಬಂತೆ ಸ್ಪೇನ್ ಗೆಲುವು ಸಾಧಿಸಿದೆ.

ಅರ್ಜೆಂಟೀನಾ ಗೆದ್ದಿದ್ದರೆ ಇಂದು ಕೇರಳದ ಬೀದಿ ಬೀದಿಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ರೆಡಿಯಾಗಿದ್ದರು. ಅಲ್ಲದೆ ನಿನ್ನೆ ರಾತ್ರಿ ನಿದ್ರೆಗೆಟ್ಟು ಪಂದ್ಯ ವೀಕ್ಷಿಸಿದ್ದರು. ಹೀಗಾಗಿ ಮಕ್ಕಳ ಅನುಕೂಲಕ್ಕೆ ಶಾಲೆಗೆ ರಜೆ ನೀಡಲಾಗಿದೆ. ಆದರೆ ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ ಎಂಬ ಸ್ಥಿತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

FIFA World Cup: ಅರ್ಜೆಂಟೀನಾ ನಿರೀಕ್ಷೆಯೆಲ್ಲಾ ಭಗ್ನವಾಯ್ತು: ಸ್ಪೇನ್ ಹೊಸ ವಿಶ್ವಚಾಂಪಿಯನ್