ಕೊಲೊಂಬೋ: ಐಸಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಹೀನಾಯ ಪ್ರದರ್ಶನದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಗೆ ಒಂದಾದ ಮೇಲೊಂದರಂತೆ ಆಘಾತ ಕಾದಿದೆ.
ವಿಶ್ವಕಪ್ ಕೂಟದ ನಡುವೆಯೇ ಶ್ರೀಲಂಕಾ ಸರ್ಕಾರ ಅಲ್ಲಿನ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿತ್ತು. ತಂಡದ ಕಳಪೆ ಪ್ರದರ್ಶನ, ಒಳರಾಜಕೀಯದಿಂದಾಗಿ ಸರ್ಕಾರ ಈ ಕ್ರಮ ಕೈಗೊಂಡಿತ್ತು.
ಇದರ ಬೆನ್ನಲ್ಲೇ ಇದೀಗ ಐಸಿಸಿ ಲಂಕಾ ಕ್ರಿಕೆಟ್ ಸದಸ್ಯತ್ವವನ್ನೇ ವಜಾಗೊಳಿಸಿದೆ. ಮಂಡಳಿಯ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಅತಿಯಾಗಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಈ ಕ್ರಮಕ್ಕೆ ಮುಂದಾಗಿದೆ.