Publish Date: Sun, 17 Oct 2021 (09:35 IST)
Updated Date: Sun, 17 Oct 2021 (09:38 IST)
ದುಬೈ: ಐಪಿಎಲ್ 14 ಹಲವು ಸ್ಮರಣೀಯ ಕ್ಷಣಗಳು, ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ ಆರ್ ಸಿಬಿ ವೇಗಿ ಹರ್ಷಲ್ ಪಟೇಲ್ ಮತ್ತು ಸಿಎಸ್ ಕೆ ಬ್ಯಾಟ್ಸ್ ಮನ್ ಅಂಬಟಿ ರಾಯುಡು ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ವೇಗಿ ಹರ್ಷಲ್ ಪಟೇಲ್ ಈ ಕೂಟದಲ್ಲಿ ಗರಿಷ್ಠ ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾದರು. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಬೌಲರ್ ಒಬ್ಬರು ಪರ್ಪಲ್ ಕ್ಯಾಪ್ ಗೌರವಕ್ಕೆ ಭಾಜನರಾಗುತ್ತಿರುವುದು ಇದು ಮೊದಲ ಬಾರಿ. ಇದಕ್ಕೂ ಮೊದಲು ಶಾನ್ ಮಾರ್ಷ್ 2008 ರಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದರು.
ಇನ್ನು, ಸಿಎಸ್ ಕೆ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿ ಪಡೆದ ತಂಡದ ಭಾಗವಾದ ದಾಖಲೆ ಮಾಡಿದರು. ಮೂರು ಬಾರಿ ಮುಂಬೈ ಇಂಡಿಯನ್ಸ್ ತಂಡ ಗೆದ್ದಾಗ ಆ ತಂಡದ ಭಾಗವಾಗಿದ್ದ ರಾಯುಡು ಈಗ ಎರಡು ಬಾರಿ ಚಾಂಪಿಯನ್ ಚೆನ್ನೈ ತಂಡದ ಭಾಗವಾಗಿದ್ದಾರೆ.