Publish Date: Sat, 16 Oct 2021 (16:59 IST)
Updated Date: Sat, 16 Oct 2021 (17:01 IST)
ದುಬೈ: ಐಪಿಎಲ್ 14 ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸುವುದರ ಜೊತೆಗೆ ಧೋನಿ ಅಭಿಮಾನಿಗಳಿಗೆ ಇನ್ನೊಂದು ಗುಡ್ ನ್ಯೂಸ್ ಸಿಗುತ್ತಿದೆಯೇ?
ಚೆನ್ನೈ ಗೆಲುವಿನ ಬಳಿಕ ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ ಮೈದಾನದಲ್ಲಿ ತಬ್ಬಿಕೊಂಡು ಸಂಭ್ರಮಾಚರಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಈ ಫೋಟೋ ನೋಡಿದ ನೆಟ್ಟಿಗರಲ್ಲಿ ಇನ್ನೊಂದು ಅನುಮಾನ ಕಾಡಿದೆ.
ಆದರೆ ಈ ಫೋಟೋ, ವಿಡಿಯೋಗಳಲ್ಲಿ ಸಾಕ್ಷಿ ಹೊಟ್ಟೆ ನೋಡಿ ನೆಟ್ಟಿಗರು ಆಕೆ ಗರ್ಭಿಣಿ ಇರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಧೋನಿ-ಸಾಕ್ಷಿಗೆ ಈಗಾಗಲೇ ಜೀವಾ ಎಂಬ ಪುತ್ರಿಯಿದ್ದಾಳೆ. ಈ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆಯೇ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.