Select Your Language

Notifications

webdunia
webdunia
webdunia
Sunday, 13 April 2025
webdunia

ಐಪಿಎಲ್ 14 ಕ್ಕೆ ಚೆನ್ನೈ ಕಿಂಗ್

ಐಪಿಎಲ್ 14
ದುಬೈ , ಶನಿವಾರ, 16 ಅಕ್ಟೋಬರ್ 2021 (08:38 IST)
ದುಬೈ: ಐಪಿಎಲ್ 14 ರ ಫೈನಲ್ ಪಂದ್ಯವನ್ನು ಕೋಲ್ಕೊತ್ತಾ ವಿರುದ್ಧ 27 ರನ್ ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಚಾಂಪಿಯನ್‍ ಆಗಿ ಹೊರಹೊಮ್ಮಿದೆ.


ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 32, ಫಾ ಡು ಪ್ಲೆಸಿಸ್ 86 ಮತ್ತು ರಾಬಿನ್ ಉತ್ತಪ್ಪ 31 ಹಾಗೂ ಮೊಯಿನ್ ಅಲಿ ಅಜೇಯ 37 ರನ್ ಗಳಿಸಿದರು.

ಈ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಕೋಲ್ಕೊತ್ತಾಗೆ ಆರಂಭಿಕರು ಭರ್ಜರಿ ಆರಂಭ ಒದಗಿಸಿದರು. ಶುಬ್ನಂ ಗಿಲ್ 51, ವೆಂಕಟೇಶ್ ಐಯರ್ 50 ರನ್ ಗಳಿಸಿದರು. ಆದರೆ ಇವರಿಬ್ಬರನ್ನು ದೀಪಕ್ ಚಹರ್ ಮತ್ತು ಶ್ರಾದ್ಧೂಲ್ ಔಟ್ ಮಾಡುವುದರೊಂದಿಗೆ ಕೆಕೆಆರ್ ಕುಸಿತಕ್ಕೆ ನಾಂದಿಯಾಯಿತು. ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕೆಕೆಆರ್ ಗೆ ಕೈ ಕೊಟ್ಟರು. ಕೆಳ ಕ್ರಮಾಂಕದಲ್ಲಿ ಫರ್ಗ್ಯುಸನ್ 18,  ಶಿವಂ ಮಾವಿ 20 ರನ್ ಗಳಿಸಿದರು. ಇದರಿಂದಾಗಿ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬಳಿಕ ಆರ್ ಸಿಬಿ ಸಾರಥಿ ಇವರಾಗಬಹುದೇ?!