Publish Date: Sat, 16 Oct 2021 (10:18 IST)
Updated Date: Sat, 16 Oct 2021 (10:38 IST)
ದುಬೈ: ಐಪಿಎಲ್ 14 ರ ಫೈನಲ್ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಸಿಎಸ್ ಕೆ ನಾಯಕ ಧೋನಿ ವೇಗಿ ಶ್ರಾದ್ಧೂಲ್ ಠಾಕೂರ್ ಮೇಲೆ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.
ಯರ್ರಾ ಬಿರ್ರಿ ಆಡುತ್ತಿದ್ದ ಕೆಕೆಆರ್ ಬ್ಯಾಟ್ಸ್ ಮನ್ ಗಳನ್ನು ಬೆನ್ನು ಬೆನ್ನಿಗೆ ಔಟ್ ಮಾಡಿ ತಂಡದ ಗೆಲುವಿಗೆ ನಾಂದಿ ಹಾಡಿದ ಶ್ರಾದ್ಧೂಲ್ ಮೇಲೆ ಧೋನಿ ಕೊನೆಯ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.
ಕೆಕೆಆರ್ ಇನಿಂಗ್ಸ್ ನ 18 ನೇ ಓವರ್ ಎಸೆಯಲು ಬಂದ ಶ್ರಾದ್ಧೂಲ್ ಸತತ ಮೂರು ವೈಡ್, ನೋ ಬಾಲ್ ಎಸೆದು ಧೋನಿ ತಾಳ್ಮೆ ಕೆಡಿಸಿದರು. ಗೆಲುವಿಗೆ ಸನಿಹವಿದ್ದಾಗ ನಿಯಂತ್ರಣ ತಪ್ಪಿ ಬೌಲಿಂಗ್ ಮಾಡುತ್ತಿದ್ದ ಶ್ರಾದ್ಧೂಲ್ ಮೇಲೆ ಅಸಮಾಧಾನ ತೋರಿಸಿದರು. ಅಲ್ಲದೆ ಕೊನೆಗೆ ಒಂದು ಡಾಟ್ ಬಾಲ್ ನ ಮೂಲಕ ಓವರ್ ಕೊನೆಗೊಳಿಸಿದಾಗ ಶ್ರಾದ್ಧೂಲ್ ಗೆ ಬೈದು ಅಸಮಾಧಾನ ಹೊರಹಾಕಿದರು.