Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಧೋನಿ ಹೇಳಿದ್ದೇನು?

ಐಪಿಎಲ್ ನಲ್ಲಿ ತಮ್ಮ ಭವಿಷ್ಯದ ಬಗ್ಗೆ ಧೋನಿ ಹೇಳಿದ್ದೇನು?
ದುಬೈ , ಶನಿವಾರ, 16 ಅಕ್ಟೋಬರ್ 2021 (09:50 IST)
ದುಬೈ: ಐಪಿಎಲ್ ನಲ್ಲಿ ಧೋನಿ ಮುಂದಿನ ವರ್ಷವೂ ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾರಾ? ಈ ಪ್ರಶ್ನೆಗೆ ನಿನ್ನೆಯ ಫೈನಲ್ ಪಂದ್ಯದ ಬಳಿಕ ಧೋನಿ ಉತ್ತರಿಸಿದ್ದಾರೆ.


ಐಪಿಎಲ್ ನಲ್ಲಿ ಮುಂದಿನ ವರ್ಷ ತಾವು ಆಡುವ ಬಗ್ಗೆ ಪ್ರಶ್ನೆ ಬಂದಾಗ ಧೋನಿ, ಏನೇ ಮಾಡಿದರೂ ನಾವು ಸಿಎಸ್ ಕೆ ಒಳಿತಿಗಾಗಿ ನಿರ್ಧಾರ ಮಾಡಲಿದ್ದೇವೆ ಎಂದಿದ್ದಾರೆ.

‘ಮುಂದಿನ ವರ್ಷ ಯಾವ ತಂಡದಲ್ಲಿ ಆಡುತ್ತೇವೆ ಎನ್ನುವುದು ಬಿಸಿಸಿಐ ಮೇಲೆ ನಿರ್ಧಾರವಾಗಿದೆ. ಸಿಎಸ್ ಕೆಗೆ ಯಾವುದು ಒಳ್ಳೆಯದು ಎಂಬುದನ್ನು ನಿರ್ಧರಿಸಬೇಕಿದೆ. ನಾನು ಟಾಪ್ ಮೂರು-ನಾಲ್ಕರಲ್ಲಿ ಇರುತ್ತೇನೆ ಎನ್ನುವುದು ಮುಖ್ಯವಲ್ಲ. ‍ಫ್ರಾಂಚೈಸಿಗೆ ಯಾವುದೇ ತೊಂದರೆಯಾಗದಂತೆ ಪ್ರಬಲ ತಂಡ ಕಟ್ಟುವುದು ಮುಖ್ಯ. ಮುಂದಿನ 10 ವರ್ಷ ತಂಡಕ್ಕೆ ಒಳ್ಳೆಯ ಕೊಡುಗೆ ನೀಡಬಲ್ಲ ಆಟಗಾರರನ್ನು ಕಂಡುಕೊಳ್ಳುವುದು ಮುಖ್ಯ’ ಎಂದು ಧೋನಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಕೆಆರ್ ಗೆಲ್ಲಬೇಕಿತ್ತು! ಐಪಿಎಲ್ ಗೆಲುವಿನ ಬಳಿಕ ಧೋನಿ ಹೀಗೆ ಹೇಳಿದ್ದೇಕೆ?!