Publish Date: Sun, 17 Oct 2021 (09:05 IST)
Updated Date: Sun, 17 Oct 2021 (09:22 IST)
ಮುಂಬೈ: ಟೀಂ ಇಂಡಿಯಾ ಮುಂದಿನ ಕೋಚ್ ಆಗಲು ವಾಲ್ ರಾಹುಲ್ ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಈಗ ಭಾರೀ ಹರಿದಾಡುತ್ತಿದೆ. ಆದರೆ ಈ ಮೊದಲು ಕೋಚ್ ಸ್ಥಾನ ಒಲ್ಲೆ ಎನ್ನುತ್ತಿದ್ದ ದ್ರಾವಿಡ್ ಈಗ ಒಪ್ಪಿದ್ದು ಹೇಗೆ?
ಇದಕ್ಕೆಲ್ಲಾ ಕಾರಣ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಂಬ ಮಾತುಗಳು ಕೇಳಿಬರುತ್ತಿವೆ. ಹಿರಿಯರ ತಂಡದ ಕೋಚ್ ಆಗಿ ದ್ರಾವಿಡ್ ಎರಡು ವರ್ಷಗಳ ಗುತ್ತಿಗೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ದ್ರಾವಿಡ್ ರನ್ನು ಕೋಚ್ ಆಗುವಂತೆ ಮನ ಒಲಿಸಿದ್ದು ಸೌರವ್ ಗಂಗೂಲಿ ಎಂಬ ಮಾತು ಕೇಳಿಬರುತ್ತಿದೆ. ಈ ಮೊದಲು ಗಂಗೂಲಿ ಅನಿಲ್ ಕುಂಬ್ಳೆ ಹೆಸರು ಸೂಚಿಸಿದ್ದರು. ಆದರೆ ಕುಂಬ್ಳೆಗೇ ಮತ್ತೆ ಟೀಂ ಇಂಡಿಯಾ ಕೋಚ್ ಆಗುವ ಆಸಕ್ತಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಅತ್ಯಂತ ಚಾಣಕ್ಷ್ಯ ಕೋಚ್ ಎಂದೇ ಖ್ಯಾತರಾಗಿರುವ, ಯುವಕರಿಗೆ ಸ್ಪೂರ್ತಿಯಾಗಿರುವ ದ್ರಾವಿಡ್ ರನ್ನು ಮುಂದಿನ ಎರಡು ವರ್ಷಗಳ ಕಾಲ ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿರ್ವಹಿಸಲು ಗಂಗೂಲಿ ಮನವಿ ಮಾಡಿದರು ಎನ್ನಲಾಗಿದೆ.