ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಟೀಂ ಇಂಡಿಯಾದ ಕೆಲವು ಹಿರಿಯ ಆಟಗಾರರು ಬಿಸಿಸಿಐಗೆ ದೂರು ನೀಡಿದ್ದರು ಎಂಬ ವರದಿಗಳ ಬಗ್ಗೆ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಸ್ಪಷ್ಟನೆ ನೀಡಿದ್ದಾರೆ.
ಕೊಹ್ಲಿ ನಾಯಕತ್ವವನ್ನು ಯಾರೂ ಪ್ರಶ್ನೆ ಮಾಡಿಲ್ಲ. ಇದರ ಬಗ್ಗೆ ಹರಿದಾಡುತ್ತಿರುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಅರುಣ್ ಧುಮಾಲ್ ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಯಾರೂ ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ದೂರು ನೀಡಿಲ್ಲ. ಇದೆಲ್ಲಾ ಆಧಾರ ರಹಿತ ವರದಿಗಳು. ವಿಶ್ವಕಪ್ ತಂಡದಲ್ಲೂ ಯಾವ ಬದಲಾವಣೆ ಮಾಡಲ್ಲ. ಇದೆಲ್ಲಾ ಸುಳ್ಳು ವರದಿಗಳು ಎಂದು ಅರುಣ್ ಸ್ಪಷ್ಟನೆ ನೀಡಿದ್ದಾರೆ.