Publish Date: Wed, 29 Sep 2021 (10:39 IST)
Updated Date: Wed, 29 Sep 2021 (10:40 IST)
ಮುಂಬೈ: ಐಪಿಎಲ್ ನಲ್ಲಿ ಕಿಂಗ್ಸ್ ಪಂಜಾಬ್ ಪ್ರದರ್ಶನದ ಬಳಿಕ ಕೋಚ್ ಆಗಿ ಅನಿಲ್ ಕುಂಬ್ಳೆಗೆ ಕುತ್ತು ಬಂದಿದೆ. ಐಪಿಎಲ್ ಪ್ರದರ್ಶನ ನೋಡಿದ ಮೇಲೆ ಬಿಸಿಸಿಐ ಅಧಿಕಾರಿಗಳು ಅವರನ್ನು ಟೀಂ ಇಂಡಿಯಾಗೆ ಕೋಚ್ ಆಗಿ ನೇಮಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಂ ಇಂಡಿಯಾ ಮುಂದಿನ ಕೋಚ್ ಆಗಿ ಅನಿಲ್ ಕುಂಬ್ಳೆಯನ್ನು ನೇಮಕ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಗಂಗೂಲಿ ಹೊರತಾಗಿ ಬೇರೆ ಯಾರೂ ಕುಂಬ್ಳೆಯನ್ನು ಕೋಚ್ ಆಗಿ ಮಾಡಲು ಬಿಸಿಸಿಐನಲ್ಲಿ ಆಸಕ್ತಿ ಹೊಂದಿರಲಿಲ್ಲ. ಅದಕ್ಕೆ ಈ ಮೊದಲು ಕೊಹ್ಲಿ-ಕುಂಬ್ಳೆ ನಡುವೆ ನಡೆದಿದ್ದ ವೈಮನಸ್ಯವೇ ಕಾರಣ.
ಇದೀಗ ಐಪಿಎಲ್ ನಲ್ಲಿ ಕಿಂಗ್ಸ್ ಪಂಜಾಬ್ ಕಳಪೆ ಪ್ರದರ್ಶನದ ಬಳಿಕವಂತೂ ಕುಂಬ್ಳೆ ಮೇಲೆ ಬಿಸಿಸಿಐ ಕಟ್ಟಾಳುಗಳು ಭರವಸೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ವಿದೇಶೀ ಕೋಚ್ ಕರೆತರುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.