Publish Date: Wed, 29 Sep 2021 (09:15 IST)
Updated Date: Wed, 29 Sep 2021 (09:18 IST)
ದುಬೈ: ಐಪಿಎಲ್ 14 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ವಿರುದ್ಧ ಕಣಕ್ಕಿಳಿಯುತ್ತಿದ್ದು ಮತ್ತೊಂದು ಗೆಲುವಿನ ಭರವಸೆಯಲ್ಲಿದೆ.
ಸತತ ಸೋಲುಗಳ ಬಳಿಕ ಕಳೆದ ಪಂದ್ಯದಲ್ಲಿ ಗೆದ್ದ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಲು ಸಫಲವಾಗಿದೆ. ಇಂದು ಮತ್ತೊಂದು ಗೆಲುವಿನೊಂದಿಗೆ ಪ್ಲೇ ಆಫ್ ಹಾದಿ ಭದ್ರಪಡಿಸುವ ತವಕದಲ್ಲಿದೆ.
ಆರ್ ಸಿಬಿಗೆ ಮುಖ್ಯವಾಗಿ ಎಬಿಡಿ ವಿಲಿಯರ್ಸ್ ರನ್ ಗಳಿಸದೇ ಇರುವುದು ಕೊರತೆಯಾಗಿ ಕಾಣುತ್ತಿದೆ. ಆದರೆ ಕೆಎಸ್ ಭರತ್ ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್ ವೆಲ್, ದೇವದತ್ತ್ ಪಡಿಕ್ಕಲ್ ಸಿಡಿದರೆ ಆರ್ ಸಿಬಿ ಬ್ಯಾಟಿಂಗ್ ಕಂಪ್ಲೀಟ್ ಆಗಲಿದೆ. ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ರಿಂದ ಹೇಳಿಕೊಳ್ಳುವ ಪ್ರದರ್ಶನ ಬಾರದೇ ಇದ್ದರೂ ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್ ಬೌಲಿಂಗ್ ಜವಾಬ್ಧಾರಿ ಹೊತ್ತಿದ್ದಾರೆ.