ದುಬೈ: ಐಪಿಎಲ್ 14 ರ ಎರಡನೇ ಭಾಗಕ್ಕೂ ಮೊದಲು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ನಾಯಕರಾಗಿ ಇದೇ ನನ್ನ ಕೊನೆಯ ಟೂರ್ನಿ ಎಂದು ಪ್ರಕಟಿಸಿದ್ದರು.
ಅದಾದ ಮೇಲೆ ಕೊಹ್ಲಿ ಈಗ ಮೊದಲಿನಂತೆ ಅಗ್ರೆಸಿವ್ ಆಗಿಲ್ಲ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಮೈದಾನದಲ್ಲಿ ಯಶಸ್ಸು ಸಿಕ್ಕಾಗ ಅಬ್ಬರಿಸುವುದು, ಅಗ್ರೆಸಿವ್ ಆಗಿ ವರ್ತಿಸುವುದು ಕೊಹ್ಲಿಯ ಗುಣ.
ಆದರೆ ಈ ಬಾರಿ ಕೊಹ್ಲಿಯಲ್ಲಿ ಈ ಸ್ವಭಾವ ಕೊಂಚ ಕಡಿಮೆಯಾಗಿದೆ. ಬಹುಶಃ ನಾಯಕರಾಗಿ ಇದು ಕೊನೆಯ ಐಪಿಎಲ್ ಎಂಬ ಭಾವುಕತೆಯೋ, ಬ್ಯಾಟಿಂಗ್ ನಲ್ಲಿ ಮೊದಲಿನ ಯಶಸ್ಸು ಸಿಗುತ್ತಿಲ್ಲ ಎನ್ನುವ ನಿರಾಸೆಯೋ ಕೊಹ್ಲಿ ಕೊಂಚ ಕೂಲ್ ಆಗಿದ್ದಾರೆ. ಆದರೆ ತಂಡದ ಯುವ ಆಟಗಾರರು ಅವರ ಆಕ್ರಮಣಕಾರಿ ಸ್ವಭಾವದ ಆರಾಧಕರು. ಅವರು ಹಾಗಿದ್ದರೇ ಚೆನ್ನ ಎಂದು ಆರ್ ಸಿಬಿ ಮಾಜಿ ವೇಗಿ ಡೇಲ್ ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.