Select Your Language

Notifications

webdunia
webdunia
webdunia
webdunia

ಕುಲದೀಪ್ ಯಾದವ್ ಗೆ ಗಾಯ: ಭಾರತಕ್ಕೆ ಮರಳಿದ ಕೆಕೆಆರ್ ಸ್ಪಿನ್ನರ್

ಕುಲದೀಪ್ ಯಾದವ್ ಗೆ ಗಾಯ: ಭಾರತಕ್ಕೆ ಮರಳಿದ ಕೆಕೆಆರ್ ಸ್ಪಿನ್ನರ್
ದುಬೈ , ಸೋಮವಾರ, 27 ಸೆಪ್ಟಂಬರ್ 2021 (16:56 IST)
ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ವಿರುದ್ಧ ಸೋಲಿನ ಬಳಿಕ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಆಘಾತ ಸಿಕ್ಕಿದೆ.


ಸ್ಪಿನ್ನರ್ ಕುಲದೀಪ್ ಯಾದವ್ ಮೊಣಕಾಲಿನ ಗಾಯಕ್ಕೊಳಗಾಗಿದ್ದು, ಭಾರತಕ್ಕೆ ವಾಪಸಾಗಿದ್ದಾರೆ. ತಂಡದ ಪ್ರ್ಯಾಕ್ಟೀಸ್ ಸೆಷನ್ ವೇಳೆ ಕುಲದೀಪ್ ಮೊಣಕಾಲಿಗೆ ಗಂಭೀರ ಗಾಯವಾಗಿದೆ.

ಈ ಹಿನ್ನಲೆಯಲ್ಲಿ ತವರಿಗೆ ಮರಳಿರುವ ಕುಲದೀಪ್ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಕೆಲವು ದಿನಗಳ ಕಾಲ ಅವರು ಕ್ರಿಕೆಟ್ ನಿಂದ ವಿಶ್ರಾಂತಿ ಪಡೆಯಬೇಕಾಗುತ್ತದೆ.  ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾ ಮತ್ತು ಐಪಿಎಲ್ ನಲ್ಲಿ ಅವರಿಗೆ ಆಡಲು ಅವಕಾಶವೇ ಸಿಗುತ್ತಿಲ್ಲ. ಅದರ ನಡುವೆ ಈ ಗಾಯ ಅವರ ವೃತ್ತಿ ಜೀವನಕ್ಕೆ ಕಂಟಕವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಷೇಧದ ಭೀತಿಯಲ್ಲಿ ಸಂಜು ಸ್ಯಾಮ್ಸನ್, ಧೋನಿ