Publish Date: Mon, 27 Sep 2021 (11:26 IST)
Updated Date: Mon, 27 Sep 2021 (09:27 IST)
ದುಬೈ: ಐಪಿಎಲ್ 14 ರಲ್ಲಿ ನಿಧಾನಗತಿಯ ಓವರ್ ನಡೆಸಿದ ತಪ್ಪಿಗೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮತ್ತು ಸಿಎಸ್ ಕೆ ನಾಯಕ ಧೋನಿ ನಿಷೇಧದ ಭೀತಿಯಲ್ಲಿದ್ದಾರೆ.
ಸಂಜು ಈಗಾಗಲೇ ನಿಧಾನಗತಿಯ ಓವರ್ ನಡೆಸಿದ್ದಕ್ಕೆ 24 ಲಕ್ಷ ರೂ. ದಂಡ ತೆತ್ತಿದ್ದಾರೆ. ಒಂದೇ ವಾರದಲ್ಲಿ ಎರಡು ಬಾರಿ ಸಂಜು ತಲಾ 12 ಲಕ್ಷ ರೂಗಳಂತೆ ದಂಡ ಕಟ್ಟಿದ್ದಾರೆ. ಮೂರನೇ ಬಾರಿ ಈ ತಪ್ಪು ಮಾಡಿದರೆ 30 ಲಕ್ಷ ದಂಡದ ಜೊತೆಗೆ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗುವ ಸಾಧ‍್ಯತೆಯಿದೆ.
ಧೋನಿ ಕೂಡಾ ಇದೇ ತಪ್ಪೆಸಗಿ ಈಗಾಗಲೇ 12 ಲಕ್ಷ ರೂ. ದಂಡ ತೆತ್ತಿದ್ದಾರೆ. ಮತ್ತೆ ಎರಡು ಬಾರಿ ಇದೇ ತಪ್ಪು ಮಾಡಿದರೆ ಧೋನಿಗೂ ನಿಷೇಧದ ಭೀತಿ ಎದುರಾಗಲಿದೆ.