Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪ್ಲೇ ಆಫ್ ನಿಂದ ಹೊರಬಿದ್ದ ಮೊದಲ ತಂಡ ಹೈದರಾಬಾದ್

ಐಪಿಎಲ್ 14: ಪ್ಲೇ ಆಫ್ ನಿಂದ ಹೊರಬಿದ್ದ ಮೊದಲ ತಂಡ ಹೈದರಾಬಾದ್
ದುಬೈ , ಭಾನುವಾರ, 26 ಸೆಪ್ಟಂಬರ್ 2021 (09:50 IST)
ದುಬೈ: ಐಪಿಎಲ್ 14 ಸನ್ ರೈಸರ್ಸ್ ಹೈದರಾಬಾದ್ ಪಾಲಿಗೆ ಅತ್ಯಂತ ಕೆಟ್ಟ ಟೂರ್ನಿಯಾಗಿತ್ತು. ಆಡಿದ 9 ಪಂದ್ಯಗಳ ಪೈಕಿ ಕಂಡಿದ್ದು ಕೇವಲ 1 ಗೆಲುವು.


ಇದರಿಂದಾಗಿ ಹೈದರಾಬಾದ್ ಈ ಕೂಟದಲ್ಲಿ ಮೊದಲನೆಯ ತಂಡವಾಗಿ ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ಕೇನ್ ವಿಲಿಯಮ್ಸನ್ ಪಡೆ ನಾಳೆ ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯವಾಡಲಿದೆ. ಆದರೆ ಅದರ ಫಲಿತಾಂಶ ಏನೂ ಉಪಯೋಗವಾಗದು.

ಆಡಂ ಗಿಲ್ ಕ್ರಿಸ್ಟ್ ನಾಯಕರಾಗಿದ್ದಾಗ ಹೈದರಾಬಾದ್ ಅತ್ಯುತ್ತಮ ತಂಡವಾಗಿತ್ತು. ಅದಾದ ಬಳಿಕ ತಂಡದ ಪ್ರದರ್ಶನ ಕೂಟದಿಂದ ಕೂಟಕ್ಕೆ ಕಳಪೆಯಾಗುತ್ತಾ ಸಾಗಿದೆ. ಮುಂದಿನ ಐಪಿಎಲ್ ಗೆ ಮೊದಲು ತಂಡ ಸಂಪೂರ್ಣವಾಗಿ ರಿಫ್ರೆಶ್ ಆಗುವ ಅಗತ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಕ್ಯಾಪ್ಟನ್ ಕೊಹ್ಲಿ, ರೋಹಿತ್ ನಡುವೆ ಇಂದಿನ ಕಾಳಗ