Publish Date: Sun, 26 Sep 2021 (08:56 IST)
Updated Date: Sun, 26 Sep 2021 (09:28 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.
ಚೆನ್ನೈ ಈ ಕೂಟದಲ್ಲಿ ಮುಂಬೈ ಸೋಲಿಸಿ ಭರ್ಜರಿ ಆರಂಭ ಕಂಡಿತ್ತು. ಫಾ ಡು ಪ್ಲೆಸಿಸ್, ಋತುರಾಜ್ ಗಾಯಕ್ ವಾಡ್ ಚೆನ್ನೈ ತಂಡದ ಬ್ಯಾಟಿಂಗ್ ಶಕ್ತಿಗಳು. ಇವರ ಜೊತೆಗೆ ರವೀಂದ್ರ ಜಡೇಜಾ ಟ್ರಂಪ್ ಕಾರ್ಡ್. ಧೋನಿ ಇತ್ತೀಚೆಗೆ ಹೇಳಿಕೊಳ್ಳುವಂತಹ ಬ್ಯಾಟಿಂಗ್ ನಡೆಸಿಲ್ಲವಾದರೂ ಯಾವ ಕ್ಷಣದಲ್ಲೂ ಅವರು ಸಿಡಿಯಬಲ್ಲರು.
ಅತ್ತ ಕೆಕೆಆರ್ ಮೊದಲ ಹಂತದಲ್ಲಿ ಕಳೆಗುಂದಿದ ಪ್ರದರ್ಶನ ನೀಡಿದ್ದರೂ ಇದೀಗ ಐಪಿಎಲ್ 14 ರ ಎರಡನೇ ಇನಿಂಗ್ಸ್ ನಲ್ಲಿ ಉತ್ತಮ ಆಟವಾಡುತ್ತಿದೆ. ನಾಯಕ ಇಯಾನ್ ಮೋರ್ಗನ್ ರಿಂದ ಉತ್ತಮ ಇನಿಂಗ್ಸ್ ಬರಬೇಕಿದೆ. ಶುಬ್ನಂ ಗಿಲ್, ನಿತೀಶ್ ರಾಣಾ ಬ್ಯಾಟಿಂಗ್ ಗೆ ಬಲತುಂಬಬಲ್ಲರು. ವರುಣ್ ಚಕ್ರವರ್ತಿ, ಪ್ರಸಿದ್ಧ ಕೃಷ್ಣ, ಫರ್ಗ್ಯುಸನ್ ಬೌಲಿಂಗ್ ಶಕ್ತಿಯಾಗಿದ್ದಾರೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.