Publish Date: Sat, 25 Sep 2021 (09:25 IST)
Updated Date: Sat, 25 Sep 2021 (09:42 IST)
ದುಬೈ: ಐಪಿಎಲ್ 14 ರಲ್ಲಿ ಇಂದು ಎರಡನೆಯ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಪಂಜಾಬ್ ನಡುವೆ ನಡೆಯಲಿದೆ.
ಎರಡೂ ತಂಡಗಳೂ ಒಂದು ರೀತಿಯಲ್ಲಿ ದುರಾದೃಷ್ಟವಂತ ತಂಡಗಳು. ಪಂಜಾಬ್ ಗೆಲುವಿನ ಹೊಸ್ತಿಲಲ್ಲಿ ಸೋತು ಹೋಗುವ ಚಾಳಿ ಮುಂದುವರಿಸಿದ್ದು, ಎಲ್ಲಾ ಸರಿ ಇದ್ದೂ ಕೊನೆಯ ಕ್ಷಣದಲ್ಲಿ ಅದೃಷ್ಟ ಕೈಕೊಡುತ್ತಿದೆ.
ಇನ್ನು, ಹೈದರಾಬಾದ್ ಸತತ ಸೋಲಿನಿಂದ ಕಂಗೆಟ್ಟಿದ್ದು, ಹೆಚ್ಚು ಕಡಿಮೆ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಹೀಗಾಗಿ ಹೈದರಾಬಾದ್ ಗೆ ಇದು ಪ್ರತಿಷ್ಠೆ ಉಳಿಸಿಕೊಳ್ಳುವ ಪಂದ್ಯವಷ್ಟೇ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.