Select Your Language

Notifications

webdunia
webdunia
webdunia
webdunia

ಐಪಿಎಲ್ 14: ಆರ್ ಸಿಬಿಗೆ ಸೋಲಿಗೆ ಇದುವೇ ಕಾರಣವಾಯ್ತು!

ಐಪಿಎಲ್ 14: ಆರ್ ಸಿಬಿಗೆ ಸೋಲಿಗೆ ಇದುವೇ ಕಾರಣವಾಯ್ತು!
ದುಬೈ , ಶನಿವಾರ, 25 ಸೆಪ್ಟಂಬರ್ 2021 (08:46 IST)
ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಅಂತರದಿಂದ ಸೋಲು ಅನುಭವಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಆರಂಭದಲ್ಲಿ ವಿರಾಟ್ ಕೊಹ್ಲಿ (53) ದೇವದತ್ತ್ ಪಡಿಕ್ಕಲ್ (70) ರನ್ ಕಲೆ ಹಾಕಿ ಅಬ್ಬರಿಸಿದರಾದರೂ ಎಬಿಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ ವೆಲ್ ರನ್ ಗಳಿಸಲು ವಿಫಲರಾಗಿದ್ದೇ ಆರ್ ಸಿಬಿ ಸೋಲಿಗೆ ಕಾರಣವಾಯಿತು. ಒಂದು ವೇಳೆ ಇವರಿಬ್ಬರೂ ಕೊಂಚ ಹೆಚ್ಚು ರನ್ ಗಳಿಸಿದ್ದರೆ ಆರ್ ಸಿಬಿ ದೊಡ್ಡ ಮೊತ್ತ ಪೇರಿಸಬಹುದಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಚೆನ್ನೈ ಈ ಸಾಧಾರಣ ಮೊತ್ತವನ್ನು ಬೆಂಬತ್ತಿ 18.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸುವ ಮೂಲಕ ಗೆಲುವು ಪಡೆಯಿತು. ಋತುರಾಜ್ ಗಾಯಕ್ ವಾಡ್ 38, ಫಾ ಡು ಪ್ಲೆಸಿಸ್ 31, ಮೊಯಿನ್ ಅಲಿ 23, ಅಂಬಟಿ ರಾಯುಡು 32 ರನ್ ಗಳಿಸಿದರು. ಇದರೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಏಕದಿನ: ಕೊನೆಯ ಬಾಲ್ ನಲ್ಲಿ ಸೋತ ಮಹಿಳೆಯರು