Publish Date: Fri, 24 Sep 2021 (10:28 IST)
Updated Date: Fri, 24 Sep 2021 (10:45 IST)
ದುಬೈ: ಮುಂಬರುವ ಟಿ20 ವಿಶ್ವಕಪ್ ಗೆ ಭರ್ಜರಿ ತಯಾರಿ ಆರಂಭವಾಗಿದೆ. ಇದೀಗ ಮಿನಿ ವಿಶ್ವಕಪ್ ಮಹಾಸಮರದ ಧ್ಯೇಯ ಗೀತೆಯೊಂದು ಬಿಡುಗಡೆಯಾಗಿದೆ.
ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿರುವ ಲೈವ್ ದಿ ಗೇಮ್ ಎಂಬ ಥೀಮ್ ಸಾಂಗ್ ನ್ನು ಐಸಿಸಿ ಲಾಂಚ್ ಮಾಡಿದೆ.
ಈ ಹಾಡಿನ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಕಿರನ್ ಪೊಲ್ಲಾರ್ಡ್, ಗ್ಲೆನ್ ಮ್ಯಾಕ್ಸ್ ವೆಲ್, ರಶೀದ್ ಖಾನ್ ಮುಂತಾದ ಕ್ರಿಕೆಟಿಗರ ಆನಿಮೇಟೆಡ್ ಪಾತ್ರಧಾರಿಗಳಿದ್ದಾರೆ. 16 ರಾಷ್ಟ್ರಗಳು ಭಾಗಿಯಾಗಲಿರುವ ಟಿ20 ವಿಶ್ವಕಪ್ ಕೂಟ ಅಕ್ಟೋಬರ್ 17 ರಿಂದ ಆರಂಭವಾಗಲಿದೆ.