Publish Date: Fri, 24 Sep 2021 (20:37 IST)
Updated Date: Fri, 24 Sep 2021 (20:38 IST)
ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆದಿದೆ.
ಇತ್ತೀಚೆಗಿನ ವರದಿ ಬಂದಾಗಿ 11 ಓವರ್ ಗಳಲ್ಲಿ 96 ರನ್ ಗಳಿಸಿದೆ. ಆರ್ ಸಿಬಿ ಪರ ನಾಯಕ ಕೊಹ್ಲಿ-ದೇವದತ್ತ್ ಪಡಿಕ್ಕಲ್ ಸ್ಪೋಟಕ ಆರಂಭ ಒದಗಿಸಿದ್ದಾರೆ. ಕೊಹ್ಲಿ 32 ಎಸೆತಗಳಲ್ಲಿ 45 ರನ್ ಗಳಿಸಿದರೆ, ದೇವದತ್ತ್ ಪಡಿಕ್ಕಲ್ 34 ಎಸೆತಗಳಿಂದ 48 ರನ್ ಗಳಿಸಿದ್ದಾರೆ.
ಇದಕ್ಕೂ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಕಳೆದ ಪಂದ್ಯ ಹೀನಾಯವಾಗಿ ಸೋತ ಆರ್ ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.