Select Your Language

Notifications

webdunia
webdunia
webdunia
webdunia

ಐಪಿಎಲ್ 14: ಕೊನೆಯಲ್ಲಿ ಸಿಡಿದ ಕೋಲ್ಕೊತ್ತಾ

ಐಪಿಎಲ್ 14: ಕೊನೆಯಲ್ಲಿ ಸಿಡಿದ ಕೋಲ್ಕೊತ್ತಾ
ದುಬೈ , ಭಾನುವಾರ, 26 ಸೆಪ್ಟಂಬರ್ 2021 (17:24 IST)
ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿದೆ.


ಆರಂಭಿಕ ಶುಬ್ನಂ ಗಿಲ್ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರೆ ವೆಂಕಟೇಶ್ ಐಯರ್ 18 ರನ್ ಗೆ ಔಟಾದರು. ಮಧ‍್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಟಿ 45 ರನ್ ಗಳಿಸಿ ತಂಡಕ್ಕೆ ಆಸರೆಯಾದರು.  ಆದರೆ ಇವರಿಂದ ದೊಡ್ಡ ಮೊತ್ತದತ್ತ ಕೊಂಡೊಯ್ಯಲು ಸಾಧ‍್ಯವಾಗಲಿಲ್ಲ.

ಈ ವೇಳೆ ಕೆಳ ಕ್ರಮಾಂಕದಲ್ಲಿ ನಿತೀಶ್ ರಾಣಾ ಅಜೇಯ 37 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ಕಟ್ಟಿಕೊಟ್ಟರು. ಆಂಡ್ರೆ ರಸೆಲ್ ರದ್ದು 20 ರನ್ ಗಳ ಕೊಡುಗೆ. ಸಿಎಸ್ ಕೆ ಪರ ಜೋಶ್ ಹೇಝಲ್ ವುಡ್, ‍ಶ್ರಾದ್ಧೂಲ್ ಠಾಕೂರ್ ತಲಾ 2 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಮಹಿಳಾ ಏಕದಿನ: ಕೊನೆಗೂ ಗೆದ್ದ ಮಿಥಾಲಿ ಪಡೆ