Publish Date: Mon, 27 Sep 2021 (08:54 IST)
Updated Date: Mon, 27 Sep 2021 (08:57 IST)
ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕವಾಗಿ ಗೆಲ್ಲುವುದರೊಂದಿಗೆ ಕೊಹ್ಲಿ ಬಳಗ ಯುಎಇನಲ್ಲಿ ಗೆಲುವಿನ ಖಾತೆ ತೆರೆದಿದೆ. ಅಲ್ಲದೆ, ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದವರಿಗೆ ಕೊಹ್ಲಿ ಈ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 165 ರನ್ ಗಳಿಸಿತ್ತು. ಈ ಮೊತ್ತ ಬಲಿಷ್ಠ ಮುಂಬೈ ಬ್ಯಾಟಿಂಗ್ ಗೆ ಸುಲಭ ತುತ್ತಾಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ವೇಗಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಕಬಳಿಸಿ ಮುಂಬೈಯನ್ನು ಕಟ್ಟಿ ಹಾಕಿದರು.
ಮುಂಬೈ ಪರ ರೋಹಿತ್ ಶರ್ಮಾ 43 ರನ್ ಗಳಿಸಿದರು. ಆರ್ ಸಿಬಿ ಪರ ಯಜುವೇಂದ್ರ ಚಾಹಲ್ 3 ವಿಕೆಟ್ ಪಡೆದುಕೊಂಡರು. ಇದರೊಂದಿಗೆ ಆರ್ ಸಿಬಿ ಸೋಲಿನ ಸರಪಳಿ ಕಡಿದುಕೊಂಡಿದೆ.