Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮತ್ತೆ ಅಗ್ರ ಸ್ಥಾನಕ್ಕೇರಲು ಡೆಲ್ಲಿಗೆ ಇಂದು ಅವಕಾಶ

ಐಪಿಎಲ್ 14: ಮತ್ತೆ ಅಗ್ರ ಸ್ಥಾನಕ್ಕೇರಲು ಡೆಲ್ಲಿಗೆ ಇಂದು ಅವಕಾಶ
ದುಬೈ , ಮಂಗಳವಾರ, 28 ಸೆಪ್ಟಂಬರ್ 2021 (09:41 IST)
ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅಗ್ರ ಸ್ಥಾನಕ್ಕಾಗಿ ಕುರ್ಚಿಯಾಟ ಮುಂದುವರಿದಿದೆ. ಇದೀಗ ಡೆಲ್ಲಿಗೆ ಮತ್ತೆ ಅಗ್ರ ಸ್ಥಾನ ಮರಳಿ ಪಡೆಯಲು ಅವಕಾಶ ಸಿಕ್ಕಿದೆ.


ಇಂದು ರಿಷಬ್ ಪಂತ್ ಪಡೆ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ. ಅತ್ತ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿರುವ ಕೆಕೆಆರ್ ಗೆ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲಾಗಿತ್ತು. ಹೀಗಾಗಿ ತನ್ನ ಸ್ಥಾನ ಉಳಿಸಿಕೊಳ್ಳಲು ಈ ಗೆಲುವು ಅನಿವಾರ್ಯವಾಗಿದೆ.

ಇನ್ನು, ಡೆಲ್ಲಿ ಮೇಲ್ನೋಟಕ್ಕೆ ಪ್ರಬಲ ತಂಡವಾಗಿ ಕಂಡರೂ ಶಿಖರ್ ಧವನ್, ಪೃಥ‍್ವಿ ಶಾ ಬೇಗನೇ ಔಟಾದರೆ ತಂಡದ ಬ್ಯಾಟಿಂಗ್ ಕುಸಿಯುತ್ತದೆ. ನಾಯಕ ರಿಷಬ್ ಪಂತ್ ರಿಂದ ಇನ್ನೂ ಖ್ಯಾತಿಗೆ ತಕ್ಕ ಆಟ ಬರಬೇಕಾಗಿದೆ. ಇಂದಿನ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗೆ ಹೃದಯಾಘಾತ