Publish Date: Fri, 18 Jun 2021 (17:02 IST)
Updated Date: Fri, 18 Jun 2021 (17:03 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಸೌಥಾಂಪ್ಟನ್ ನಲ್ಲಿ ನಡೆಯಬೇಕಿರುವ ಪಂದ್ಯ ಮಳೆಯಿಂದಾಗಿ ಇನ್ನೂ ಆರಂಭವಾಗಿಲ್ಲ.
ಟಾಸ್ ಕೂಡಾ ನಡೆದಿಲ್ಲ. ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಇದು ತೀರಾ ನಿರಾಸೆ ತಂದಿದೆ. ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು, ಅಂಪಾಯರ್ ಗಳು ನಿರೀಕ್ಷಣೆ ನಡೆಸುತ್ತಿದ್ದಾರೆ.
ಮೊದಲ ಅವಧಿ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಇಂದಿನ ದಿನವಿಡೀ ಮಳೆ ಸುರಿಯುವ ಲಕ್ಷಣ ಕಾಣುತ್ತಿದೆ.