Select Your Language

Notifications

webdunia
webdunia
webdunia
webdunia

ಇಂದಿನಿಂದ ಭಾರತ-ನ್ಯೂಜಿಲೆಂಡ್ ಟೆಸ್ಟ್ ವಿಶ್ವಕಪ್

ಇಂದಿನಿಂದ ಭಾರತ-ನ್ಯೂಜಿಲೆಂಡ್ ಟೆಸ್ಟ್ ವಿಶ್ವಕಪ್
ಸೌಥಾಂಪ್ಟನ್ , ಶುಕ್ರವಾರ, 18 ಜೂನ್ 2021 (08:49 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದಿನಿಂದ ಇಂಗ್ಲೆಂಡ್ ನ ಸೌಥಾಂಪ್ಟನ್ ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದು ಒಂದು ರೀತಿಯಲ್ಲಿ ಟೆಸ್ಟ್ ಕ್ರಿಕೆಟ್ ನ ವಿಶ್ವಕಪ್.

 
ಹೀಗಾಗಿ ಈ ಪಂದ್ಯವನ್ನು ಗೆಲ್ಲುವುದು ಎರಡೂ ತಂಡಗಳಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿಗೆ ಇದು ನಾಯಕತ್ವದ ಪರೀಕ್ಷೆಯಾಗಿದೆ.

ಭಾರತಕ್ಕೆ ಇಲ್ಲಿ ವೇಗಿಗಳನ್ನು ಎದುರಿಸುವುದೇ ಸವಾಲಾಗಲಿದೆ. ಈಗಾಗಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಿರುವ ನ್ಯೂಜಿಲೆಂಡ್ ಇಲ್ಲಿನ ಹವಾಗುಣಕ್ಕೆ ಸರಿಯಾಗಿಯೇ ಒಗ್ಗಿಕೊಂಡಿದೆ. ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಬೌಲಿಂಗ್ ನ್ನು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಸಮರ್ಥವಾಗಿ ಎದುರಿಸಿದರೆ ಮಾತ್ರ ಪಂದ್ಯದಲ್ಲಿ ಮೇಲುಗೈ ಸಾಧಿಸಬಹುದಾಗಿದೆ. ನ್ಯೂಜಿಲೆಂಡ್ ಗೆ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಶಕ್ತಿಯಾಗಿದ್ದರೆ, ಭಾರತಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಬಲ. ಈ ಇಬ್ಬರು ಮದಗಜಗಳ ನಡುವಿನ ರೋಚಕ ಹೋರಾಟಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.00 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಚಾಂಪಿಯನ್ ಶಿಪ್ ಆಡಲಿರುವ ಟೀಂ ಇಂಡಿಯಾಕ್ಕೆ ಸಚಿನ್ ಕೊಟ್ಟ ಸಲಹೆ