Publish Date: Thu, 17 Jun 2021 (10:39 IST)
Updated Date: Thu, 17 Jun 2021 (10:40 IST)
ಮುಂಬೈ: ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಮನವಿಯೊಂದನ್ನು ಲಂಕಾ ಕ್ರಿಕೆಟ್ ಮಂಡಳಿ ಅನಿವಾರ್ಯವಾಗಿ ನಿರಾಕರಿಸಿದೆ.
ಸೀಮಿತ ಓವರ್ ಗಳ ಸರಣಿಗೆ ಮೊದಲು ದ್ರಾವಿಡ್ ತಮ್ಮ ಯುವ ತಂಡಕ್ಕೆ ಅಭ್ಯಾಸ ಪಂದ್ಯವನ್ನು ಆಯೋಜಿಸಬೇಕೆಂದು ಬಯಸಿದ್ದರು. ಆದರೆ ಕೊವಿಡ್ ನಿಯಮದ ಕಾರಣ ಇದಕ್ಕೆ ಅನುಮತಿ ಸಿಕ್ಕಿಲ್ಲ.
ಬದಲಾಗಿ ಟೀಂ ಇಂಡಿಯಾವನ್ನೇ ವಿಭಜಿಸಿ ಆಂತರಿಕ ಪಂದ್ಯವಾಡಲು ಸಲಹೆ ನೀಡಲಾಗಿದೆ. ಹೀಗಾಗಿ ದ್ರಾವಿಡ್ ಈಗ ತಮ್ಮ ಹುಡುಗರನ್ನು ತಯಾರುಗೊಳಿಸಲು ಇಂಟ್ರಾ ಸ್ಕ್ವಾಡ್ ಮ್ಯಾಚ್ ಆಯೋಜಿಸಲಿದ್ದಾರೆ.