Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್: ಫ್ಯಾನ್ಸ್ ಖುಷ್

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್: ಫ್ಯಾನ್ಸ್ ಖುಷ್
ಮುಂಬೈ , ಬುಧವಾರ, 16 ಜೂನ್ 2021 (09:15 IST)
ಮುಂಬೈ: ಕೊನೆಗೂ ರಾಹುಲ್ ದ್ರಾವಿಡ್ ರನ್ನು ಟೀಂ ಇಂಡಿಯಾ ಕೋಚ್ ಆಗಿ ಕಾಣುವ ಯೋಗ ಅಭಿಮಾನಿಗಳದ್ದಾಗಿದೆ. ಲಂಕಾ ಪ್ರವಾಸ ಮಾಡಲಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ದ್ರಾವಿಡ್ ಕೋಚ್ ಆಗಲಿದ್ದಾರೆ.


ಈ ಬಗ್ಗೆ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾಗೆ ಖಾಯಂ ಆಗಿ ದ್ರಾವಿಡ್ ಕೋಚ್ ಆಗಬೇಕೆಂಬುದು ಅಭಿಮಾನಿಗಳ ಕನಸು. ಆದರೆ ಇದುವರೆಗೆ ಅದು ಸಾಧ್ಯವಾಗಿಲ್ಲ. ಈಗಲಾದರೂ ದ್ರಾವಿಡ್ ಕೋಚ್ ಆಗುವ ಮೂಲಕ ನಮ್ಮೆಲ್ಲರ ಕನಸು ನನಸಾಯಿತು ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಕಾರಣಕ್ಕಾಗಿ ಈ ಸರಣಿ ವೀಕ್ಷಿಸಲಿದ್ದೇವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಂಕಾ ಸರಣಿಗೆ ದ್ರಾವಿಡ್ ಕೋಚ್: ಸ್ಪಷ್ಟಪಡಿಸಿದ ಸೌರವ್ ಗಂಗೂಲಿ