Select Your Language

Notifications

webdunia
webdunia
webdunia
webdunia

ಕನ್ನಡಿಗ ಮನೀಶ್ ಪಾಂಡೆಗೆ ಟೀಂ ಇಂಡಿಯಾದಲ್ಲಿ ಲಾಸ್ಟ್ ಚಾನ್ಸ್

ಕನ್ನಡಿಗ ಮನೀಶ್ ಪಾಂಡೆಗೆ ಟೀಂ ಇಂಡಿಯಾದಲ್ಲಿ ಲಾಸ್ಟ್ ಚಾನ್ಸ್
ಮುಂಬೈ , ಮಂಗಳವಾರ, 15 ಜೂನ್ 2021 (09:48 IST)
ಮುಂಬೈ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯವಾಡಲು ಟೀಂ ಇಂಡಿಯಾದ ಎರಡನೇ ತಂಡ ಕೊಲೊಂಬೋಗೆ ಪ್ರಯಾಣ ಬೆಳೆಸಲಿದೆ. ಈ ತಂಡದಲ್ಲಿ ಕನ್ನಡಿಗ ಮನೀಶ್ ಪಾಂಡೆಗೂ ಸ್ಥಾನ ಸಿಕ್ಕಿದೆ.


ಕಳೆದ ಕೆಲವು ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲು ಪರದಾಡುತ್ತಿದ್ದ ಪಾಂಡೆಗೆ ಈಗ ಕೊನೆಗೂ ಅವಕಾಶವೊಂದು ಸಿಕ್ಕಿದೆ. ಅದನ್ನು ಅವರು ಯಾವ ರೀತಿ ಬಳಸುತ್ತಾರೆ ಎಂದು ನೋಡಬೇಕಿದೆ.

ಯಾಕೆಂದರೆ ಈ ಹಿಂದೆ ಮಧ‍್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಸರಾಸರಿ ಪ್ರದರ್ಶನ ನೀಡಿದ್ದ ಮನೀಶ್ ಪಾಂಡೆ ಕೊನೆಗೆ ಫಾರ್ಮ್ ಕಳೆದುಕೊಂಡು ತಂಡಕ್ಕೆ ಆಯ್ಕೆಯೇ ಆಗುತ್ತಿರಲಿಲ್ಲ. ಇದೀಗ ಲಂಕಾ ಪ್ರವಾಸಕ್ಕೆ ಅವಕಾಶ ಪಡೆದಿದ್ದಾರೆ. ಈ ಬಾರಿ ಅವರು ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಟೀಂ ಇಂಡಿಯಾ ಸೀಮಿತ ಓವರ್ ಗಳಲ್ಲಿ ಸ್ಥಿರ ಸ್ಥಾನ ಪಡೆಯಬಹುದಾಗಿದೆ. ಒಂದು ವೇಳೆ ವಿಫಲರಾದರೆ ಮತ್ತೆ ಅವರಿಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕ್ಷೀಣವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗರು