ಮುಂಬೈ: ಎನ್ ಸಿಎ ನಿರ್ದೇಶಕ, ಭಾರತ ಎ ತಂಡದ ಮಾಜಿ ಕೋಚ್ ಆಗಿರುವ ವಾಲ್ ರಾಹುಲ್ ದ್ರಾವಿಡ್ ಕೋಚಿಂಗ್ ಶೈಲಿ ಬಗ್ಗೆ ಟೀಂ ಇಂಡಿಯಾ ಆರಂಭಿಕ ಶುಬ್ನಂ ಗಿಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಎಂದರೆ ಶಾಂತಮೂರ್ತಿ ಎಂದೇ ಹೆಸರು ವಾಸಿ. ಹೀಗಿರುವ ದ್ರಾವಿಡ್ ಗೆ ಕೋಚ್ ಆಗಿದ್ದಾಗ ಸಿಟ್ಟು ಬರುತ್ತಿತ್ತೇ ಎಂದು ಸಂದರ್ಶಕರು ಕೇಳಿದ್ದಕ್ಕೆ ಶುಬ್ನಂ ಗಿಲ್ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಬಾಯಿ, ಯಾವತ್ತೂ ಪ್ರತಿಯೊಬ್ಬ ಆಟಗಾರನ ಬಳಿ ಹೋಗಿ ನೀನು ಹಾಗಿರಬೇಕು, ಹೀಗಿರಬೇಕು ಎಂದು ನಿರ್ದೇಶನ ಕೊಡಲ್ಲ. ಆದರೆ ಆಟಗಾರರ ಮಾನಸಿಕ ಸ್ಥಿತಿಗತಿ ಬಗ್ಗೆ ಅವರ ಹೆಚ್ಚು ಗಮನ ಹರಿಸುತ್ತಾರೆ. ಯಾರೂ ರಾಹುಲ್ ಬಾಯಿ ಆಟಗಾರನಾಗಿ ಕೋಪಗೊಂಡಿದ್ದು ನೋಡಿಲ್ಲ. ಆದರೆ ಕೋಚ್ ಆಗಿ ಆಟಗಾರರಲ್ಲಿ ಗೊಂದಲ ಉಂಟು ಮಾಡುವುದು ಅವರಿಗೆ ಇಷ್ಟವಾಗಲ್ಲ ಎಂದು ಗಿಲ್ ಹೇಳಿದ್ದಾರೆ.