Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ಯಶಸ್ವಿ ಸೂತ್ರ ವಿವರಿಸಿದ ವೆಂಕಟೇಶ್ ಪ್ರಸಾದ್

ಟೀಂ ಇಂಡಿಯಾಗೆ ಯಶಸ್ವಿ ಸೂತ್ರ ವಿವರಿಸಿದ ವೆಂಕಟೇಶ್ ಪ್ರಸಾದ್
ಸೌಥಾಂಪ್ಟನ್ , ಮಂಗಳವಾರ, 15 ಜೂನ್ 2021 (10:21 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಬಹುದಾದ ಪ್ರಮುಖ ಕಾರಣವನ್ನು ಕನ್ನಡಿಗ, ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವಿವರಿಸಿದ್ದಾರೆ.


’90 ರ ದಶಕದಲ್ಲಿ ಭಾರತ ತಂಡದಲ್ಲಿ ಕೇವಲ ಇಬ್ಬರು ವೇಗಿಗಳಿರುತ್ತಿದ್ದರು. ಆದರೆ ಈಗ ಹಾಗಲ್ಲ. ಭಾರತ ತಂಡದ ಬೆಂಚ್ ಸ್ಟ್ರೆಂಗ್ತ್ ಸ್ಟ್ರಾಂಗ್ ಆಗಿದೆ. ಪ್ರತಿಭಾವಂತ ವೇಗಿಗಳ ಪಡೆಯೇ ಇದೆ. ಅದರ ಜೊತೆಗೆ ಇಬ್ಬರು ಆಲ್ ರೌಂಡರ್ ಗಳಿದ್ದಾರೆ. ವಿಶ್ವ ದರ್ಜೆಯ ಸ್ಪಿನ್ನರ್ ಗಳಿದ್ದಾರೆ. ಇವರೆಲ್ಲಾ ಸೇರಿಕೊಂಡರೆ 350 ರನ್ ಸ್ಕೋರ್ ಮಾಡಿದರೂ ಮೇಲುಗೈ ಸಾಧಿಸಬಹುದು’ ಎಂದು ವೆಂಕಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಇಲ್ಲಿನ ಪಿಚ್ ಗಳಲ್ಲಿ ಪಂದ್ಯ ಐದನೇ ದಿನದವರೆಗೆ ಹೋದರೆ ಅಚ್ಚರಿ. ಇತ್ತೀಚೆಗೆ ಮೂರು-ನಾಲ್ಕು ದಿನಗಳಲ್ಲಿ ಟೆಸ್ಟ್ ಮುಗಿದು ಹೋಗುತ್ತದೆ. ಆದರೆ ಇಲ್ಲಾದರೂ ಐದು ದಿನದವರೆಗೆ ಆಟ ನಡೆಯಲಿ ಎಂದು ಅವರು ಆಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗ ಮನೀಶ್ ಪಾಂಡೆಗೆ ಟೀಂ ಇಂಡಿಯಾದಲ್ಲಿ ಲಾಸ್ಟ್ ಚಾನ್ಸ್