Publish Date: Thu, 17 Jun 2021 (09:28 IST)
Updated Date: Thu, 17 Jun 2021 (09:30 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಗೆ ಕಮ್ ಬ್ಯಾಕ್ ಮಾಡಲು ಅವಕಾಶವೇ ಸಿಗದಂತಾಗಿದೆ.
ರೋಹಿತ್ ಶರ್ಮಾ ಬರುವ ಮೊದಲು ರಾಹುಲ್ ಟೆಸ್ಟ್ ತಂಡದ ಆರಂಭಿಕರಾಗಿದ್ದರು. ಆದರೆ ಒಮ್ಮೆ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರ ನಡೆದ ಮೇಲೆ ಅವರಿಗೆ ಅವಕಾಶ ಸಿಗುವುದು ಕಷ್ಟವಾಗಿದೆ. ಶುಬ್ಮಂ ಗಿಲ್ ಕೂಡಾ ಕ್ಲಿಕ್ ಆದ ಮೇಲೆ ಅವರಿಗೆ ಮತ್ತೆ ತಂಡಕ್ಕೆ ಮರಳುವ ಅವಕಾಶ ಕ್ಷೀಣವಾಗಿದೆ.
ಒಂದು ವೇಳೆ ಈ ಸರಣಿಯಲ್ಲಿ ಗಿಲ್ ವಿಫಲರಾದರೆ ಮಾತ್ರ ರಾಹುಲ್ ಗೆ ಮತ್ತೊಂದು ಅವಕಾಶ ಸಿಗಬಹುದು. ಆದರೆ ಇದಕ್ಕೆ ಅವರು ಇನ್ನೊಬ್ಬ ಆರಂಭಿಕ ಮಯಾಂಕ್ ಅಗರ್ವಾಲ್ ಜೊತೆ ಪೈಪೋಟಿ ನಡೆಸಬೇಕಾಗುತ್ತದೆ. ಆದರೆ ರಾಹುಲ್ ವಿಚಾರದಲ್ಲಿ ವಿಪರ್ಯಾಸವೆಂದರೆ ಫಾರ್ಮ್ ನಲ್ಲಿದ್ದರೂ ಅವರಿಗೆ ಆಡುವ ಅವಕಾಶ ಸಿಗದೇ ಇರುವುದು. ಇದು ಅವರ ಅಭಿಮಾನಿಗಳಲ್ಲೂ ನಿರಾಸೆ ಉಂಟುಮಾಡಿದೆ. ಒಬ್ಬ ಅತ್ಯುತ್ತಮ ಕ್ಲಾಸ್ ಆಟಗಾರ ಟೆಸ್ಟ್ ತಂಡದಲ್ಲಿ ಮೂಲೆಗುಂಪಾಗುತ್ತಿರುವುದು ವಿಪರ್ಯಾಸ.