Select Your Language

Notifications

webdunia
webdunia
webdunia
webdunia

ವಿಶ್ವ ಚಾಂಪಿಯನ್ ಶಿಪ್ ಆಡಲಿರುವ ಟೀಂ ಇಂಡಿಯಾಕ್ಕೆ ಸಚಿನ್ ಕೊಟ್ಟ ಸಲಹೆ

ವಿಶ್ವ ಚಾಂಪಿಯನ್ ಶಿಪ್ ಆಡಲಿರುವ ಟೀಂ ಇಂಡಿಯಾಕ್ಕೆ ಸಚಿನ್ ಕೊಟ್ಟ ಸಲಹೆ
ಸೌಥಾಂಪ್ಟನ್ , ಗುರುವಾರ, 17 ಜೂನ್ 2021 (11:05 IST)
ಸೌಥಾಂಪ್ಟನ್: ನಾಳೆಯಿಂದ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೆಲವು ಸಲಹೆ ನೀಡಿದ್ದಾರೆ.


ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಅಂತಿಮ ಬಳಗ ಆಯ್ಕೆ ಮಾಡುವ ಬಗ್ಗೆ ಸಚಿನ್ ಕೊಹ್ಲಿ ಬಳಗಕ್ಕೆ ಸಲಹೆ ನೀಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಇಬ್ಬರು ಸ್ಪಿನ್ನರ್ ಗಳನ್ನು ಆಡಿಸುವ ಬಗ್ಗೆ ಗೊಂದಲದಲ್ಲಿರುವ ಟೀಂ ಇಂಡಿಯಾಗೆ ಸಚಿನ್, ಜಡೇಜಾ ಮತ್ತು ಅಶ್ವಿನ್ ರನ್ನು ಆಡಿಸಿ ಎಂದು ಸಲಹೆ ನೀಡಿದ್ದಾರೆ.

ಒಂದು ವೇಳೆ ಇಬ್ಬರೂ ತಂಡದಲ್ಲಿ ಆಡಿದರೆ ಟೀಂ ಇಂಡಿಯಾ ಇನ್ನಷ್ಟು ಸ್ಟ್ರಾಂಗ್ ಆಗಲಿದೆ. ಇಬ್ಬರೂ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡಾ ಮಾಡಬಲ್ಲರು. ಕೆಲವರು ಇಂಗ್ಲೆಂಡ್ ನಲ್ಲಿ ಸ್ಪಿನ್ ಬೌಲಿಂಗ್ ನಡೆಯಲ್ಲ ಅಂತಾರೆ. ಆದರೆ ನನ್ನ ಪ್ರಕಾರ ಇಲ್ಲಿ ಸ್ಪಿನ್ನರ್ ಗಳಿಗೂ ಸಹಾಯ ಸಿಗುತ್ತದೆ. ಇಲ್ಲಿನ ಪಿಚ್ ನ್ನು ಅರಿತು ಜಾಣ್ಮೆಯಿಂದ ಆಡಿದರೆ ಮೇಲುಗೈ ಸಾಧಿಸಬಹುದು’ ಎಂದು ಸಚಿನ್ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮನವಿ ನಿರಾಕರಿಸಿದ ಲಂಕಾ