Publish Date: Fri, 18 Jun 2021 (09:02 IST)
Updated Date: Fri, 18 Jun 2021 (09:05 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿರುವ ಟೀಂ ಇಂಡಿಯಾಗೆ ಕಹಿ ದಾಖಲೆ ಕಾಡುತ್ತಿದೆ.
ಸೌಥಾಂಪ್ಟನ್ ನಲ್ಲಿ ಹಿಂದೆ ಆಡಿದ ಎರಡೂ ಪಂದ್ಯಗಳನ್ನು ಟೀಂ ಇಂಡಿಯಾ ಸೋತಿತ್ತು. ಹೀಗಾಗಿ ಈ ಮೈದಾನ ಭಾರತದ ಪಾಲಿಗೆ ಕಹಿ ನೆನಪನ್ನು ಹೊತ್ತು ನಿಂತಿದೆ. ಅದೂ ಜಹೀರ್ ಖಾನ್ ರಂತಹ ಘಟಾನುಘಟಿ ಬೌಲರ್ ಗಳಿದ್ದರೂ ಟೀಂ ಇಂಡಿಯಾ ಅಂದು ಸೋಲುಂಡಿತ್ತು.
ಆದರೆ ಕಿವೀಸ್ ಇದುವರೆಗೆ ಇಲ್ಲಿ ಪಂದ್ಯವಾಡಿಲ್ಲ. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ಆಡಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಗೆದ್ದ ಉತ್ಸಾಹ ಆ ತಂಡಕ್ಕಿದೆ.