Select Your Language

Notifications

webdunia
webdunia
webdunia
webdunia

ಕೊಹ್ಲಿ ಪುತ್ರಿಗೆ ಬೆದರಿಕೆ ಹಾಕಿದವನ ಜನ್ಮ ಜಾಲಾಡುತ್ತಿರುವ ಪೊಲೀಸರು

ಕೊಹ್ಲಿ ಪುತ್ರಿಗೆ ಬೆದರಿಕೆ ಹಾಕಿದವನ ಜನ್ಮ ಜಾಲಾಡುತ್ತಿರುವ ಪೊಲೀಸರು
ಮುಂಬೈ , ಮಂಗಳವಾರ, 2 ನವೆಂಬರ್ 2021 (17:08 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವಿರಾಟ್ ಕೊಹ್ಲಿ ಪುತ್ರಿ ವಮಿಕಾ ಕೊಹ್ಲಿಗೆ ಅತ್ಯಚಾರ ಬೆದರಿಕೆ ಹಾಕಿದ್ದರು.

ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕ್ರಿಕೆಟ್ ಸೋಲಿಗೆ ಈ ರೀತಿಯ ಕೀಳುಮಟ್ಟದ ಪೋಸ್ಟ್ ಮಾಡಿದ್ದು ನಾಚಿಕೆಗೇಡು ಎಂದು ಸೆಲೆಬ್ರಿಟಿಗಳೂ ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸರಿಗೆ ಈ ರೀತಿ ಬಹಿರಂಗವಾಗಿ ಕೀಳುಮಟ್ಟದ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸುವಂತೆ ನೋಟಿಸ್ ನೀಡಿದೆ. ಈ ಬಗ್ಗೆ ಎಫ್ ಐಆರ್ ಕೂಡಾ ದಾಖಲಾಗಿದೆ. ಪೊಲೀಸರು ಇದೇ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಗೆ ಮರಳಲಿದ್ದಾರೆ ಯುವರಾಜ್ ಸಿಂಗ್!