Select Your Language

Notifications

webdunia
webdunia
webdunia
webdunia

ವಿರಾಟ್ ಪುತ್ರಿಯ ವಿರುದ್ಧ ಅತ್ಯಾಚಾರ ಬೆದರಿಕೆ: ನಟಿ ರಮ್ಯಾ ಕಿಡಿ

ವಿರಾಟ್ ಪುತ್ರಿಯ ವಿರುದ್ಧ ಅತ್ಯಾಚಾರ ಬೆದರಿಕೆ: ನಟಿ ರಮ್ಯಾ ಕಿಡಿ
ದುಬೈ , ಮಂಗಳವಾರ, 2 ನವೆಂಬರ್ 2021 (10:00 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ್ದಕ್ಕೆ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಪುತ್ರಿ ವಮಿಕಾ ಕೊಹ್ಲಿ ವಿರುದ್ಧ ಅತ್ಯಾಚಾರ ಬೆದರಿಕೆ ಪೋಸ್ಟ್ ಗಳೂ ಹರಿದಾಡಿದ್ದವು. ಇದರ ಬಗ್ಗೆ ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಪಂದ್ಯ ಸೋತಿದ್ದಕ್ಕೆ ಪುಟಾಣಿ ಹೆಣ್ಣು ಮಗುವಿನ ಬಗ್ಗೆ ಈ ರೀತಿ ಬೆದರಿಕೆ ಹಾಕುವುದನ್ನು ನೋಡಿದರೆ ನಮ್ಮ ಸಮಾಜದಲ್ಲಿ ಎಂತೆಂಥಾ ಮನಸ್ಥಿತಿಯವರಿದ್ದಾರೆ ಎಂದು ತೋರಿಸುತ್ತದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಕೆಎಲ್ ರಾಹುಲ್ ಐಪಿಎಲ್ ಗೆ ಲಾಯಕ್ಕು