Select Your Language

Notifications

webdunia
webdunia
webdunia
webdunia

ಪಾಕ್ ಪತ್ರಕರ್ತನ ಪ್ರಶ್ನೆಗೆ ವ್ಯಂಗ್ಯ ಮಾಡಿದ ವಿರಾಟ್ ಕೊಹ್ಲಿ

ಪಾಕ್ ಪತ್ರಕರ್ತನ ಪ್ರಶ್ನೆಗೆ ವ್ಯಂಗ್ಯ ಮಾಡಿದ ವಿರಾಟ್ ಕೊಹ್ಲಿ
ದುಬೈ , ಸೋಮವಾರ, 25 ಅಕ್ಟೋಬರ್ 2021 (10:16 IST)
ದುಬೈ: ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಸೋಲುಂಡ ಬಳಿಕ ಮಾಧ್ಯಮದ ಮುಂದೆ ಹಾಜರಾದ ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ಪ್ರಶ್ನೆಗಳ ಬಾಣವೇ ಎದುರಾಗಿದೆ.

ಈ ನಡುವೆ ಪಾಕ್ ಪತ್ರಕರ್ತನೊಬ್ಬ ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಹೊರಗಿಟ್ಟು ಉತ್ತಮ ಫಾರ್ಮ್ ನಲ್ಲಿರುವ ಇಶಾನ್ ಕಿಶನ್ ರನ್ನು ಆಡಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಪ್ರಶ್ನೆ ಕೇಳಿದ ಪತ್ರಕರ್ತನ ನೋಡಿ ವ್ಯಂಗ್ಯವಾಗಿ ನಕ್ಕ ಕೊಹ್ಲಿ, ರೋಹಿತ್ ಟಿ20 ದಾಖಲೆಗಳನ್ನು ನೋಡಿದ ಮೇಲೂ ಈ ಪ್ರಶ್ನೆ ಕೇಳುತ್ತಿದ್ದೀರಾ? ಅವರನ್ನು ಹೊರಗಿಡಲು ಸಾಧ್ಯವೇ? ನಿಮಗೆ ಈ ವಿಷಯದಲ್ಲಿ ವಿವಾದ ಸೃಷ್ಟಿಸಬೇಕೆಂದು ಆಸೆಯಿದ್ದರೆ ಮೊದಲೇ ಹೇಳಿ. ಆ ರೀತಿಯೇ ಉತ್ತರ ಕೊಡುತ್ತೇನೆ’ ಎಂದ ಕೊಹ್ಲಿ ಅಬ್ಬಾ ಎಂಥಾ ಪ್ರಶ್ನೆ ಕೇಳುತ್ತೀರಿ ಎಂದು ಹಣೆ ಚಚ್ಚಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಸೋತಿದ್ದಕ್ಕೆ ಇನ್ ಸ್ಟಾಗ್ರಾಂನಲ್ಲಿ ಮೊಹಮ್ಮದ್ ಶಮಿಗೆ ನಿಂದನೆ