Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ‘ವಿರಾಟ ಪರ್ವ’ಕ್ಕೆ ಮನಸೋತ ಭಾರತೀಯರು

ಟಿ20 ವಿಶ್ವಕಪ್: ‘ವಿರಾಟ ಪರ್ವ’ಕ್ಕೆ ಮನಸೋತ ಭಾರತೀಯರು
ದುಬೈ , ಭಾನುವಾರ, 24 ಅಕ್ಟೋಬರ್ 2021 (21:17 IST)
ದುಬೈ: ಟಿ20 ವಿಶ್ವಕಪ್ ನ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ ವಿಕೆಟ್ 7 ನಷ್ಟಕ್ಕೆ 151 ರನ್ ಗಳಿಸಿದೆ.

ಆರಂಭದಲ್ಲೇ ಬಿಗ್ ಹಿಟ್ಟರ್ ರೋಹಿತ್ ಶರ್ಮಾ (0), ಕೆಎಲ್ ರಾಹುಲ್ (3) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಆಸರೆಯಾಗಿದ್ದು ನಾಯಕ ವಿರಾಟ್ ಕೊಹ್ಲಿ. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಕೊಹ್ಲಿ ಅರ್ಧಶತಕ ಗಳಿಸಿದ ಬಳಿಕ ಬಿರುಸಿನ ಆಟಕ್ಕೆ ಕೈ ಹಾಕಿದರು. ತಕ್ಕ ಸಮಯದಲ್ಲಿ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದ ಕೊಹ್ಲಿ 49 ಎಸೆತಗಳಿಂದ 57 ರನ್ ಗಳಿಸಿ ಔಟಾದರು. ಇವರಿಗೆ ತಕ್ಕ ಸಾಥ್ ನೀಡಿದವರು ರಿಷಬ್ ಪಂತ್. 30 ಎಸೆತಗಳಿಂದ 39 ರನ್ ಗಳಿಸಿದ ರಿಷಬ್ ಶಹಬಾದ್ ಖಾನ್ ಬೌಲಿಂಗ್ ನಲ್ಲಿ ಕಾಟ್ ಆಂಡ್ ಬೌಲ್ಡ್ ಆದರು.

ಕೊಹ್ಲಿಗೆ ತಕ್ಕ ಸಾಥ್ ನೀಡಿದ ರವೀಂದ್ರ ಜಡೇಜಾ 13 ರನ್ ಗಳಿಸಿ ಮಿಂಚಿದರು. ಕೊನೆಯಲ್ಲಿ ಬಂದ ಹಾರ್ದಿಕ್ ಪಾಂಡ್ಯ 7 ಎಸೆತಗಳಿಂದ 11 ರನ್ ಗಳಿಸಿ ತಂಡದ ಮೊತ್ತ 150 ರ ಗಡಿ ತಲುಪಲು ನೆರವಾದರು. ಪಾಕ್ ಪರ ಶಾಹಿನ್ ಅಫ್ರಿದಿ 3 ವಿಕೆಟ್ ಕಬಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ 152 ರನ್ ಗಳ ಗೆಲುವಿನ ಗುರಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಟಾಸ್ ಗೆದ್ದ ಪಾಕಿಸ್ತಾನ