Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಟೀಂ ಇಂಡಿಯಾ ಆಡುವ ಬಳಗ ಹೀಗಿರಬಹುದು

ಟಿ20 ವಿಶ್ವಕಪ್: ಟೀಂ ಇಂಡಿಯಾ ಆಡುವ ಬಳಗ ಹೀಗಿರಬಹುದು
ದುಬೈ , ಭಾನುವಾರ, 24 ಅಕ್ಟೋಬರ್ 2021 (08:52 IST)
ದುಬೈ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ಇಂದು ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುತ್ತಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಅಂತಿಮ ಬಳಗ ಹೇಗಿರಬಹುದು ಎಂದು ನೋಡೋಣ.

 
ಟೀಂ ಇಂಡಿಯಾ ಈ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆಗೆ ಕೆಎಲ್ ರಾಹುಲ್ ರನ್ನು ಕಣಕ್ಕಿಳಿಸಬಹುದು. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ಇಶಾನ್ ಕಿಶನ್ ಗೆ ನಾಲ್ಕನೇ ಕ್ರಮಾಂಕ ಸಿಗುವ ಸಾಧ‍್ಯತೆಯಿದೆ. ಹೀಗಾದಲ್ಲಿ ಸೂರ್ಯಕುಮಾರ್ ಯಾದವ್ ಹೊರಗುಳಿಯಬೇಕಾದೀತು.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಗುವ ಸಾಧ್ಯತೆಯಿದೆ. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಆಡುವುದು ಖಚಿತ. ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಜೊತೆಗೆ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಬಹದು. ಸ್ಪಿನ್ನರ್ ಸ್ಥಾನಕ್ಕೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ನಡುವೆ ಪೈಪೋಟಿಯಿದೆ. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸ್ಥಾನ ಸಿಗುವ ಸಾಧ‍್ಯತೆಯಿದೆ. ಒಂದು ವೇಳೆ ಇಬ್ಬರೂ ಸ್ಥಾನ ಪಡೆಯಬೇಕಾದರೆ ಹಾರ್ದಿಕ್ ಪಾಂಡ್ಯ ಹೊರಗುಳಿಯಬೇಕಾದೀತು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಇಂದು ಭಾರತ-ಪಾಕ್ ಕ್ರಿಕೆಟ್ ಹಬ್ಬ