Publish Date: Sat, 23 Oct 2021 (09:31 IST)
Updated Date: Sat, 23 Oct 2021 (09:32 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಅರ್ಹತಾ ಸುತ್ತು ಮುಗಿದು ಇಂದಿನಿಂದ ರಿಯಲ್ ಫೈಟ್ ಶುರುವಾಗುತ್ತಿದೆ. ಮೊದಲ ದಿನ ಇಂದು ಎರಡು ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ-ದ.ಆಫ್ರಿಕಾ ಮುಖಾಮುಖಿಯಾಗಲಿವೆ. ಇವೆರಡೂ ತಂಡಗಳಿಗೆ ಇದುವರೆಗೆ ಟಿ20 ವಿಶ್ವಕಪ್ ಗೆಲ್ಲಲು ಸಾಧ‍್ಯವಾಗಿಲ್ಲ. ಇದುವರೆಗೆ ಟಿ20 ವಿಶ್ವಕಪ್ ನಲ್ಲಿ ಎರಡೂ ತಂಡಗಳು ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗಿದ್ದು, ಅದರಲ್ಲಿ ಆಸ್ಟ್ರೇಲಿಯಾ ಜಯ ಗಳಿಸಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ.
ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಸೆಣಸಾಡಲಿವೆ. ಈಗಿನ ಪರಿಸ್ಥಿತಿ ಗಮನಿಸಿದೆರ ಟಿ20 ಶ್ರೇಯಾಂಕದಲ್ಲಿ ನಂ.1 ಆಗಿರುವ ಇಂಗ್ಲೆಂಡ್ ಗೆ ವಿಂಡೀಸ್ ಸುಲಭ ತುತ್ತಾಗಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿದೆ. ಹಾಗಿದ್ದರೂ ಐಸಿಸಿ ಈವೆಂಟ್ ಗಳಲ್ಲಿ ವಿಂಡೀಸ್ ಇದುವರೆಗೂ ಉತ್ತಮ ಪೈಪೋಟಿಯನ್ನೇ ನೀಡಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.