ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಧೋನಿ ಮೆಂಟರ್ ಆಗಿ ಆಯ್ಕೆಯಾಗುವುದರ ಹಿಂದೆ ನಾಯಕ ವಿರಾಟ್ ಕೊಹ್ಲಿ ಆಗ್ರಹ ಕಾರಣ! ಹೀಗಂತ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಹೇಳಿದ್ದಾರೆ.
ಕೊಹ್ಲಿಗೆ ನಾಯಕರಾಗಿ ಇದು ಕೊನೆಯ ಟಿ20 ಕೂಟ. ಹೀಗಾಗಿ ಹೇಗಾದರೂ ಮಾಡಿ ಈ ಐಸಿಸಿ ಪ್ರಶಸ್ತಿ ಗೆಲ್ಲಲೇಬೇಕೆಂದು ಕೊಹ್ಲಿ ಬಿಸಿಸಿಐ ಮೇಲೆ ಒತ್ತಡ ಹೇರಿ ಧೋನಿಯನ್ನು ಮೆಂಟರ್ ಆಗಿ ತಂಡಕ್ಕೆ ಸೇರಿಸಿಕೊಂಡಿರಬಹುದು ಎಂದು ಪನೇಸರ್ ಹೇಳಿದ್ದಾರೆ.
ಧೋನಿ ನಾಯಕತ್ವದಲ್ಲಿ ಅವರು ಹಿಂದೆ ಆಡಿದ್ದಾರೆ. ಅವರ ಜೊತೆಗೆ ಒಳ್ಳೆಯ ನೆನಪುಗಳಿವೆ. ಹೀಗಾಗಿ ಕೊನೆಯದಾಗಿ ಯಶಸ್ಸಿನ ಜೊತೆಗೆ ನಾಯಕತ್ವಕ್ಕೆ ವಿದಾಯ ಹೇಳಲು ಅವರು ಯೋಜನೆ ಹಾಕಿಕೊಂಡಿರಬಹುದು ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.