Select Your Language

Notifications

webdunia
webdunia
webdunia
webdunia

ಬೌಂಡರಿ ಗೆರೆ ಬಳಿ ರಿಷಬ್ ಪಂತ್ ಗೆ ಧೋನಿ ಪಾಠ

ಬೌಂಡರಿ ಗೆರೆ ಬಳಿ ರಿಷಬ್ ಪಂತ್ ಗೆ ಧೋನಿ ಪಾಠ
ದುಬೈ , ಶುಕ್ರವಾರ, 22 ಅಕ್ಟೋಬರ್ 2021 (08:52 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮೆಂಟರ್ ಆಗಿರುವ ಧೋನಿ ಕೀಪರ್ ರಿಷಬ್ ಪಂತ್ ಗೆ ಕೀಪಿಂಗ್ ಪಾಠ ಹೇಳಿಕೊಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಬ್ ಆಡಿರಲಿಲ್ಲ. ಆದರೆ ಈ ಸಮಯವನ್ನು ಹಾಳು ಮಾಡಿಕೊಳ್ಳದೇ ಧೋನಿ ಬೌಂಡರಿ ಗೆರೆ ಬಳಿಯೇ ಸ್ಟಂಪ್ಸ್ ಇಟ್ಟು ರಿಷಬ್ ಗೆ ಕೀಪಿಂಗ್ ಪಾಠ ಮಾಡಿದ್ದಾರೆ.

ಇದಕ್ಕೂ ಮೊದಲು ಇಶಾನ್ ಕಿಶನ್ ಗೂ ಧೋನಿ ಕೀಪಿಂಗ್ ಕ್ಲಾಸ್ ಮಾಡಿದ್ದರು. ಅಂತೂ ಧೋನಿ ಬಂದ ಮೇಲೆ ಈ ಇಬ್ಬರೂ ಯುವ ಕೀಪರ್ ಗಳಿಗೆ ಒಳ್ಳೆಯ ಪಾಠವೇ ಸಿಕ್ಕಿದೆ. ಇನ್ನು, ಧೋನಿ ಕೀಪಿಂಗ್ ಮಾಡುವ ಫೋಟೋಗೆ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ?: ಮೈಕಲ್ ವಾನ್