Publish Date: Thu, 21 Oct 2021 (08:55 IST)
Updated Date: Thu, 21 Oct 2021 (09:01 IST)
ದುಬೈ: ಟಿ20 ವಿಶ್ವಕಪ್ ನ ನಿನ್ನೆಯ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕರಾದರೆ, ಕೊಹ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು.
ನಿನ್ನೆಯ ಪಂದ್ಯವನ್ನು ಭಾರತ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು. ಕಳೆದ ಪಂದ್ಯದಲ್ಲಿ ರೋಹಿತ್ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಈ ಪಂದ್ಯದಲ್ಲಿ ರೋಹಿತ್ ಆಡಿದ್ದಲ್ಲದೆ, ನಾಯಕನಾಗಿ ಕರ್ತವ್ಯ ನಿರ್ವಹಿಸಿದರು. ಬದಲಿಗೆ ಕೊಹ್ಲಿ ಬ್ಯಾಟಿಂಗ್ ನಿಂದ ವಿಶ್ರಾಂತಿ ಪಡೆದರು.
ಆದರೆ ಬೌಲರ್ ಆಗಿ ಕಣಕ್ಕಿಳಿದ ಕೊಹ್ಲಿ ಎರಡು ಓವರ್ ಎಸೆದು 12 ರನ್ ನೀಡಿ ಗಮನಾರ್ಹ ಪ್ರದರ್ಶನ ನೀಡಿದರು. ವಿಶೇಷವೆಂದರೆ ಬಹಳ ದಿನಗಳ ನಂತರ ಸೀಮಿತ ಓವರ್ ಗಳ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುತ್ತಿರುವ ಆರ್. ಅಶ್ವಿನ್ 2 ಪ್ರಮುಖ ವಿಕೆಟ್ ಕಿತ್ತು ಎದುರಾಳಿಗಳಿಗೆ ಘಾತಕವಾದರು.