Publish Date: Sat, 23 Oct 2021 (10:08 IST)
Updated Date: Sat, 23 Oct 2021 (10:11 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮೆಂಟರ್ ಆಗಿರುವ ಮಾಜಿ ನಾಯಕ ಧೋನಿ ನೆಟ್ಸ್ ನಲ್ಲಿ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಿದ್ದಾರೆ.
Photo Courtesy: BCCI Twitter
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ನೆಟ್ ಅಭ್ಯಾಸ ಶುರು ಮಾಡಿದ್ದು, ಈ ವೇಳೆ ಧೋನಿ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಬ್ಯಾಟ್ಸ್ ಮನ್ ಗಳಿಗೆ ನೆರವಾಗಿದ್ದಾರೆ.
ಸ್ವತಃ ತಾವೇ ಬಾಲ್ ಎಸೆದು ಬ್ಯಾಟ್ಸ್ ಮನ್ ಗಳ ಅಭ್ಯಾಸಕ್ಕೆ ನೆರವಾಗುತ್ತಿರುವ ಫೋಟೋ ನೋಡಿ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು, ಮೆಂಟರ್ ಎಂದರೆ ಹೀಗಿರಬೇಕು ಎಂದು ಧೋನಿಯನ್ನು ಹೊಗಳಿದ್ದಾರೆ.