Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಎಚ್ಚರಿಕೆ ಸಂದೇಶ ನೀಡಿದ ಸ್ಕಾಟ್ ಲ್ಯಾಂಡ್ ಸ್ಪಿನ್ನರ್

ವಿರಾಟ್ ಕೊಹ್ಲಿಗೆ ಎಚ್ಚರಿಕೆ ಸಂದೇಶ ನೀಡಿದ ಸ್ಕಾಟ್ ಲ್ಯಾಂಡ್ ಸ್ಪಿನ್ನರ್
ದುಬೈ , ಶನಿವಾರ, 23 ಅಕ್ಟೋಬರ್ 2021 (11:34 IST)
ದುಬೈ: ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತಕ್ಕೇರಿರುವ ಸ್ಕಾಟ್ ಲ್ಯಾಂಡ್‍ ತಂಡದ ಸ್ಪಿನ್ನರ್ ಮಾರ್ಕ್ ವ್ಯಾಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


ಅರ್ಹತಾ ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್ ಕಬಳಿಸಿರುವ ಮಾರ್ಕ್ ವ್ಯಾಟ್ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕಲು ಪ್ಲ್ಯಾನ್ ಮಾಡಿರುವುದಾಗಿ ಹೇಳಿದ್ದಾರೆ.

ಕೊಹ್ಲಿಯನ್ನು ಕಟ್ಟಿಹಾಕಲು ನನ್ನ ಬಳಿಕ ಕೆಲವು ಉಪಾಯಗಳಿವೆ. ಈಗ ಅವರು ನನ್ನ ಬಗ್ಗೆ ಚಿಂತೆ ಮಾಡಬೇಕು. ಅವರನ್ನು ಸುಮ್ಮನಾಗಿಸಲು ನನ್ನ ಬಳಿ ಉಪಾಯವಿದೆ. ಬಿಗ್ ಸ್ಟಾರ್ ವಿಕೆಟ್ ಪಡೆಯುವುದೇ ನನ್ನ ಗುರಿ. ನಮ್ಮ ತಂಡದ ಎಲ್ಲರೂ ಘಟಾನುಘಟಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಕಾಯ್ತಿದ್ದಾರೆ’ ಎಂದು ಮಾರ್ಕ್ ವ್ಯಾಟ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ನ ಟಾಪ್ ಸ್ಕೋರರ್ ಆಗ್ತಾರಾ ಕೆಎಲ್ ರಾಹುಲ್?