Publish Date: Sun, 24 Oct 2021 (08:45 IST)
Updated Date: Sun, 24 Oct 2021 (08:56 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಲೀಗ್ ಪಂದ್ಯದಲ್ಲಿ ಸೆಣಸಾಡುತ್ತಿದೆ.
ಎಲ್ಲಾ ಪಂದ್ಯಗಳಿಗಿಂತಲೂ ಈ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚು. ಯಾಕೆಂದರೆ ಎರಡೂ ಎದುರಾಳಿಗಳು ಐಸಿಸಿ ಈವೆಂಟ್ ಗಳಲ್ಲಿ ಮಾತ್ರ ಎದುರಾಗುತ್ತವೆ. ಹೀಗಾಗಿ ಈ ಪಂದ್ಯವೆಂದರೆ ಕ್ರಿಕೆಟ್ ಪ್ರಿಯರಿಗೆ ಹಬ್ಬ, ಕ್ರಿಕೆಟಿಗರಿಗೆ ಒತ್ತಡ ಹೆಚ್ಚು.
ಇನ್ನು, ತಂಡಗಳ ಬಲಾಬಲ ಹೇಳುವುದಾದರೆ ಟೀಂ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ತೋರಿದ ನಿರ್ವಹಣೆ ಮತ್ತೆ ಇಲ್ಲಿ ಮುಂದುವರಿಸಿದರೆ ಇಂದಿನ ಪಂದ್ಯ ಗೆಲ್ಲಬಹುದು. ಐಸಿಸಿ ಈವೆಂಟ್ ಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದ್ದೇ ಹೆಚ್ಚು. ಆದರೆ ಟಿ20 ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡವೂ ಪ್ರಬಲ ತಂಡವೇ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದೆ.