Publish Date: Wed, 27 Oct 2021 (12:20 IST)
Updated Date: Wed, 27 Oct 2021 (09:22 IST)
ದುಬೈ: ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ತಪ್ಪೇನೆಂದು ಮಾಜಿ ವೇಗಿ ಜಹೀರ್ ಖಾನ್ ವಿವರಿಸಿದ್ದಾರೆ.
ಕೊಹ್ಲಿ ಎಡವಿದ್ದೇ ತಮ್ಮ ಗೇಮ್ ಪ್ಲ್ಯಾನ್ ನಲ್ಲಿ. ಈ ಪಂದ್ಯದಲ್ಲಿ ಕೊಹ್ಲಿ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರಿಂದ ಓವರ್ ಆರಂಭಿಸಿದರು. ಇದೇ ಅವರ ದೊಡ್ಡ ತಪ್ಪು. ಭುವಿ ಜೊತೆ ಜಸ್ಪ್ರೀತ್ ಬುಮ್ರಾ ಓಪನಿಂಗ್ ಬೌಲಿಂಗ್ ಮಾಡಬೇಕಿತ್ತು ಎಂದು ಜಹೀರ್ ಆಭಿಪ್ರಾಯಪಟ್ಟಿದ್ದಾರೆ.
ಒಮ್ಮೆ ಆಡಲಿಳಿದ ಮೇಲೆ ಯಾವ ಯೋಜನೆಗಳೂ ಕೈಹಿಡಿಯಲ್ಲ. ಇದನ್ನೆಲ್ಲಾ ಅಂಗಣಕ್ಕಿಳಿಯುವ ಮೊದಲೇ ಯೋಜನೆ ರೂಪಿಸಬೇಕು. ಈ ಪಂದ್ಯದಲ್ಲಿ ಬುಮ್ರಾರನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು ದೊಡ್ಡ ತಪ್ಪಾಯ್ತು ಎಂದು ಜಹೀರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.